ದಾವಣಗೆರೆ, ಡಿ.7- ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅನಾಮಧೇಯ ವ್ಯಕ್ತಿಯ ಶವ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ಗೋಮಾಳ ಜಮೀನಿನಲ್ಲಿ ನಿನ್ನೆ ಪತ್ತೆಯಾಗಿದೆ.
ಸುಮಾರು 30 ರಿಂದ 35 ವರ್ಷ ವಯಸ್ಸು ಇರಬಹುದೆಂದು ಪೊಲೀಸರು ಅಂದಾಜಿಸಿದ್ದು, ವ್ಯಕ್ತಿಯ ವಿಳಾಸ ಪತ್ತೆಯಾಗಿಲ್ಲ. ಯಾವುದೋ ದ್ವೇಷದಿಂದ ಈ ವ್ಯಕ್ತಿಯನ್ನು ಕೊಲೆಗೈದು ಹೀಗೆ ಸುಟ್ಟು ಹಾಕಲಾಗಿದೆ ಎನ್ನಲಾಗಿದ್ದು, ಪೊಲೀಸರು ಶವದ ವಾರಸುದಾರರ ಹುಡುಕಾಟದಲ್ಲಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವದ ಬಲಗೈಯಲ್ಲಿ ಕಡಗ ಮತ್ತು ಆಮೆ ಉಂಗುರ ಇದ್ದು ಈ ಅಪರಿಚಿತ ಶವದ ಬಗ್ಗೆ
ಮಾಹಿತಿ ಇದ್ದರೆ ಗ್ರಾಮಾಂತರ ಪೊಲೀಸ್ ವೃತ್ತಾಧಿಕಾರಿ (94808 03232) ಗಳಿಗೆ ಮಾಹಿತಿ ನೀಡಬಹುದು.