ದಾವಣಗೆರೆ, ಡಿ.7 – ಇಬ್ಬರು ಮನೆಗಳ್ಳರನ್ನು ಬಂಧಿಸಿರುವ ಸಂತೇಬೆನ್ನೂರು ಪೊಲೀಸರು, ಕಾರು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಾಹನ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರೋಷನ್ ಮತ್ತು ಚಾಂದ್ ಪೀರ್ ಬಂಧಿತ ಆರೋಪಿಗಳು. ಇಬ್ಬರೂ ಚನ್ನಗಿರಿ ಪಟ್ಟಣದ ನಿವಾಸಿಗಳೆಂದು ಹೇಳಲಾಗಿದ್ದು, ಹತ್ತು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಚಾಂದ್‍ಪೀರ್ ನಿಂದ ಸಂತೇಬೆನ್ನೂರು ಠಾಣೆಯ 2 ಪ್ರಕರಣಗಳು ಮತ್ತು ಚನ್ನಗಿರಿ ಠಾಣೆಯ 5 ಪ್ರಕರಣಗಳು ಹಾಗೂ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ 1 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಲಕ್ಷ ರೂ. ಮೌಲ್ಯದ 1 ಇನ್ನೋವಾ ಕಾರು, 40 ಗ್ರಾಂ ಬಂಗಾರದ ಒಡವೆಗಳು, 5 ಬೈಕ್ ಗಳು, 14 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂತೇಬೆನ್ನೂರು ಠಾಣಾ ಪಿಎಸ್‍ಐ ಶಿವರುದ್ರಪ್ಪ ಎಸ್.ಮೇಟಿ ಮತ್ತು ಅವರ ಠಾಣಾ ಸಿಬ್ಬಂದಿಗಳಾದ ಡಿ. ನಿಂಗಣ್ಣ, ಮೊಹಮದ್ ಅಕ್ರಂವುಲ್ಲಾ, ವಿ.ಟಿ. ಉಮೇಶ ಮತ್ತು ಧರ್ಮಪ್ಪ, ಕೊಟ್ರೇಶ್, ರುದ್ರಸ್ವಾಮಿ, ಆರ್. ನಾಗರಾಜ್ ನಾಯ್ಕ, ರಂಗೇಗೌಡ, ಜೆ. ರಂಗಸ್ವಾಮಿ, ಚನ್ನಗಿರಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ರೂಪ್ಲಿಬಾಯಿ, ಅವರ ಸಿಬ್ಬಂದಿಗಳಾದ ರುದ್ರೇಶ್, ಮಂಜುನಾಥ ಪ್ರಸಾದ್, ರಂಗಸ್ವಾಮಿ, ಉಮಾಪತಿ, ಸಂತೇಬೆನ್ನೂರು ಠಾಣೆಯ ಸೋಮಶೇಖರ್ ಸೇರಿದಂತೆ ಇತರೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.