ನಿಟುವಳ್ಳಿಯಲ್ಲಿ ಅಪರಿಚಿತ ವೃದ್ಧನ ಶವ ಪತ್ತೆ

ನಿಟುವಳ್ಳಿಯಲ್ಲಿ ಅಪರಿಚಿತ ವೃದ್ಧನ ಶವ ಪತ್ತೆ - Janathavaniದಾವಣಗೆರೆ, ಜು.27- ನಿಟುವಳ್ಳಿಯ ಜೋಡಿ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ. ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು – ಬಿಳಿ ಕೂದಲು, ಬಿಳಿ ಗಡ್ಡ, ಸಿಮೆಂಟ್ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಲುಂಗಿ, ಮಾಸಲು ಟವೆಲ್ ಧರಿಸಿದ್ದಾನೆ. ಇವರ ವಾರಸುದಾರರಿದ್ದಲ್ಲಿ, ಕೆಟಿಜೆ ನಗರ ಪೊಲೀಸ್ ಠಾಣೆ (08192-259293) ಸಂಪರ್ಕಿಸಬಹುದು.

error: Content is protected !!