ಮುಂಬೈ, ಜು. 25 – ಇ-ಸಿಮ್ ಒದಗಿಸುವ ನೆಪದಲ್ಲಿ ಬ್ಯಾಂಕ್ ಖಾತೆಯ ವಿವರ ಪಡೆದು ವಂಚಿಸುವ ದಂಧೆಯ ಬಗ್ಗೆ ಎಚ್ಚರ ವಹಿಸುವಂತೆ ಮಹಾರಾಷ್ಟ್ರದ ಸೈಬರ್ ಪೊಲೀಸರು ತಿಳಿಸಿದ್ದಾರೆ.
ತಾವು ಮೊಬೈಲ್ ಕಂಪನಿಯವರು ಎಂದು ಹೇಳಿಕೊಳ್ಳುವ ವಂಚಕರು, ಜನರಿಂದ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆಯುತ್ತಿದ್ದಾರೆ ಎಂದು ಮಹಾರಾಷ್ಟ್ರ ಸೈಬರ್ ಪೊಲೀಸರು ತಿಳಿಸಿದ್ದಾರೆ.
ಕೆಲ ಮೊಬೈಲ್ ಸೇವಾದಾರರು ಇ-ಸಿಮ್ ಪರಿಚಯಿಸಿದ್ದಾರೆ. ಸಿಮ್ ಬದಲು ಚಿಪ್ ಅಳವಡಿಕೆಯಾಗಿರುವ ಕೆಲ ಮೊಬೈಲ್ ಮಾಡೆಲ್‌ಗಳ ಮೂಲಕ ಈ ಸೇವೆ ಪಡೆಯಬಹುದಾಗಿದೆ.
ಇಂತಹ ಮೊಬೈಲ್‌ಗಳಲ್ಲಿ ಹೊಸ ಸಿಮ್ ಅಳವಡಿಕೆಯ ಅಗತ್ಯವಿಲ್ಲದೇ ಸೇವೆಗಳನ್ನು ಪಡೆಯಬಹುದು. ಇದರಿಂದ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಪೋರ್ಟ್ ಆಗುವುದು ಬಹಳ ಸುಲಭವಾಗಿರುತ್ತದೆ.
ಈ ಸೌಲಭ್ಯವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇ – ಸಿಮ್ ಒದಗಿಸಲು ಮಾಹಿತಿ ಬೇಕೆಂದು ಪಡೆದು ಗ್ರಾಹಕರಿಗೆ ಟೋಪಿ ಹಾಕುತ್ತಿದ್ದಾರೆ.