ಜಗಳೂರು, ಜು. 25- ಗರ್ಭಿಣಿ ಪತ್ನಿಯನ್ನು ಬರ್ಬರವಾಗಿ ಮಚ್ಚಿನಿಂದ ಕೊಲೆಗೈದು ತಾನೂ ಸಹ ನೇಣು ಹಾಕಿಕೊಂಡ ಘಟನೆ ತಾಲ್ಲೂಕಿನ ಗಿಡ್ಡನಕಟ್ಟೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಂದ್ರಪ್ಪ (23) ತನ್ನ ಪತ್ನಿ ಲಕ್ಷ್ಮೀ (21)ಯ ಕುತ್ತಿಗೆ ಮತ್ತು ಎದೆಗೆ ಹರಿತವಾದ ಮಚ್ಚಿನಿಂದ ಹಲವು ಬಾರಿ ಕೊಚ್ಚಿ ಕೊಂದು, ನಂತರ ತಾನೂ ನೇಣು ಹಾಕಿಕೊಂಡಿದ್ದಾನೆ.
ದಂಪತಿಗಳಿಬ್ಬರೂ ವರ್ಷದ ಹಿಂದ್ಟೇ ಅಂತರ್ಜಾತಿ ವಿವಾಹವಾಗಿದ್ದರು. ಚಂದ್ರಪ್ಪನಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಸ್ಥಳಕ್ಕೆ ಎಸ್ಪಿ ಹನುಮಂತರಾಯ ಮತ್ತು ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.