ದಾವಣಗೆರೆ, ಜು.26- ಇಲ್ಲಿಗೆ ಸಮೀ ಪದ ದೊಡ್ಡಬಾತಿ ಗ್ರಾಮದ ಗೂಡ್‌ಶೆಡ್ ಮುಂಭಾಗ ಪಿ.ಬಿ. ರಸ್ತೆಯಲ್ಲಿ ಇದೇ ದಿನಾಂಕ 22ರ ರಾತ್ರಿ 9.30ರ ಸಮಯದಲ್ಲಿ ಅಪ ಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ನಗರದ ಸಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವ್ಯಕ್ತಿಯ ಹೆಸರು, ವಿಳಾಸ ತಿಳಿದಿರುವುದಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಈತ ಸುಮಾರು 30-35 ವಯಸ್ಸಿನವನಾಗಿದ್ದು, ಆರೇಂಜ್ ಕಲರ್ ಟೀ ಶರ್ಟ್, ನೀಲಿ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ವಾರಸುದಾರರಿದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.