ದಾವಣಗೆರೆ, ಜು.18- ಮನೆಗೆ ಕನ್ನ ಹಾಕಿರುವ ಕಳ್ಳರು, ಸುಮಾರು 30 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಕೊರಳ ಚೈನ್ ಹಾಗೂ 19 ಸಾವಿರ ನಗದು ಕಳವು ಮಾಡಿರುವ ಘಟನೆ ಇಲ್ಲಿನ ಆನೆಕೊಂಡ ಮುಖ್ಯ ರಸ್ತೆಯಲ್ಲಿ ನಡೆದಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿನ ತರಕಾರಿ ವ್ಯಾಪಾರಿ ಬಿ.ಆರ್. ಪ್ರಭಾಕರ್ ಎಂಬುವರ ತಾಯಿ ತಾವು ವಾಸವಿದ್ದ ಹಳೆ ಮನೆಗೆ ಬೀಗ ಹಾಕಿ ನಿನ್ನೆ ರಾತ್ರಿ ಹೊಸ ಮನೆಗೆ ಹೋಗಿದ್ದಾಗ ಈ ಕಳ್ಳತನ ನಡೆದಿದೆ.
January 24, 2025