ದಾವಣಗೆರೆ, ಜು.14- ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಮನನೊಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಲೆನಿನ್ ನಗರದಲ್ಲಿ ಇಂದು ಸಂಜೆ ನಡೆದಿದೆ.
ಗಣೇಶ್ (18) ಮೃತ ವಿದ್ಯಾರ್ಥಿ. ಸ್ನೇಹಿತರೊಂದಿಗೆ ಇಂಟರ್‌ನೆಟ್‌ನಲ್ಲಿ ಫಲಿತಾಂಶ ನೋಡಿದಾಗ ವಾಣಿಜ್ಯ ವಿಭಾಗದಲ್ಲಿ ಮೂರು ವಿಷಯ ಗಳಲ್ಲಿ ಅನುತ್ತೀರ್ಣನಾಗಿರುವುದು ತಿಳಿದಿದ್ದು, ಆಗ ಸ್ನೇಹಿತರು ಬೇಸರವಾಗಿದ್ದ ವಿದ್ಯಾರ್ಥಿ ಗಣೇಶನನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದರು.
ಆದರೆ, ತನ್ನ ತಾಯಿ ಜಯಲಕ್ಷ್ಮೀ ಅವರು ಮನೆಯಿಂದ ಅಂಗಡಿಗೆ ಹೋದ ವೇಳೆ ಈ ವಿದ್ಯಾರ್ಥಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದರು.