ದಾವಣಗೆರೆ, ಜು.10- ತನ್ನ ಪತ್ನಿಯನ್ನೇ ಕೊಲೆ ಮಾಡಿದ ಪತಿಗೆ 3 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ, 25 ಸಾವಿರ ದಂಡ ವಿಧಿಸಿ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು ನಿನ್ನೆ ತೀರ್ಪು ನೀಡಿದ್ದಾರೆ.
ಮತ್ತಿ ಗ್ರಾಮದ ಬೀರಪ್ಪ ಶಿಕ್ಷೆಗೊಳಗಾದ ಪತಿ. ಈತ ಸೆಪ್ಟೆಂಬರ್ 14, 2018ರಂದು ತನ್ನ ಪತ್ನಿ ಸಾವಿತ್ರಮ್ಮನನ್ನು ಕೊಲೆ ಮಾಡಿದ್ದ. ಈ ಬಗ್ಗೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಂದು ಗ್ರಾಮಾಂತರ ಸಿಪಿಐ ಆಗಿದ್ದ ತನಿಖಾಧಿಕಾರಿ ಹೆಚ್. ಗುರುಬಸವರಾಜ ಅವರು ದೋಷಾರೋಪಣೆ ಪಟ್ಟಿ ಯನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಕೆಂಚಪ್ಪ ವಾದ ಮಂಡಿಸಿದ್ದರು.