ಹೈಸ್ಕೂಲ್ ಮೈದಾನದಲ್ಲಿ ಬುದ್ಧಿಮಾಂಧ್ಯ ಹೆಣ್ಣು ಮಗು ಪತ್ತೆ

ದಾವಣಗೆರೆ, ಜು.7- ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ಅಪರಿಚಿತ ಹೆಣ್ಣು ಮಗು ಪತ್ತೆಯಾಗಿದ್ದು, ಅನಾಥವಾಗಿ ಕುಳಿತ ಈ ಮಗು ಬುದ್ದಿಮಾಂಧ್ಯವೆನ್ನಲಾಗಿದೆ.

ಮೈದಾನದ ಆವರಣದಲ್ಲಿ ಸುಮಾರು 3-4 ವರ್ಷ ವಯೋಮಾನದ ಈ ಮಗು ವಿಶ್ರಾಂತಿ ಪಡೆಯುವ ಬೆಂಚ್ ಮೇಲೆ ಏಕಾಂಗಿ ಯಾಗಿ ಕುಳಿತಿರುವುದು ಕಂಡು ಬಂದಿದೆ. ಜೊತೆಗೆ ಹಳದಿ ಬಣ್ಣದ ಬಟ್ಟೆ ಯುಳ್ಳ ಬ್ಯಾಗ್ ಸಹ ಪತ್ತೆಯಾಗಿದೆ.

ಕರುಳ ಬಳಿಯನ್ನೇ ಬಿಟ್ಟು ಹೋ ದರೆ ಹೆತ್ತವರು ಇಲ್ಲವೇ ಯಾರೋ ತಂದು ಬಿಟ್ಟು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

ಇಂದು ಬೆಳಗ್ಗೆ 10 ಗಂಟೆಯಿಂದ ಅಂದರೆ ಮೂರುವರೆ ಗಂಟೆಗಳ ಕಾಲ ಏಕಾಂಗಿಯಾಗಿ ಈ ಬಾಲಕಿ ಪೋಷಕರು ಕಾಣದೆ ದಿಕ್ಕು ತೋಚದೇ ಕುಳಿತಿರುವುದು ಕಂಡಿದೆ. ಈ ಬಾಲಕಿ ಯಾರು, ಯಾವ ಊರು, ಯಾಕೆ ಇಲ್ಲಿದೆ, ಯಾರಾದರೂ ಬಿಟ್ಟು ಹೋದರೆ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವ ಜನಿಕ ವಲಯದಲ್ಲಿ ಮೂಡಿದ್ದು, ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಬಾಲಕಿಯ ಸಂಕಷ್ಟದ ಪರಿಸ್ಥಿತಿ ಕಂಡರೆ ಕರುಳು ಕಿವುಚಿದಂತಾಗುತ್ತಿತ್ತು. ನಾಗರಿಕರು ಬಿಸ್ಕೆಟ್, ನೀರು, ತಿನಿಸು ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ  ಡಾನ್ ಬಾಸ್ಕೋ ಮಕ್ಕಳ ಸಹಾಯವಾಣಿ ತಂಡದ ಅಧಿಕಾರಿಗಳಾದ ಹೆಚ್. ಸುನೀಲ್, ಬಿ. ಸ್ವಾಮಿ, ಮಂಜುಳಾ ಇತರರು ಮಗುವನ್ನು ರಕ್ಷಿಸಿದ್ದಾರೆ.

ಮಗುವನ್ನು ಕೋವಿಡ್ ಪರೀಕ್ಷೆ ಮತ್ತು ಜನರಲ್ ಮೆಡಿಕಲ್ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಸದ್ಯಕ್ಕೆ ಸ್ಥಳೀಯ ರಾಮ ನಗರದ ಶಿಶು ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಮಗುವಿಗೆ ಬುದ್ಧಿಮಾಂಧ್ಯದ ಜೊತೆಗೆ ಕುರುಡುತನ, ಮೂಕತನವೂ ಇರುವುದರಿಂದ ಅದಕ್ಕೆ ಸೂಕ್ತವಾದ ವ್ಯವಸ್ಥೆಯುಳ್ಳ  ಹುಬ್ಬಳಿಯ ಸರ್ಕಾರಿ ಬಾಲ ಮಂದಿರಕ್ಕೆ ಶುಕ್ರವಾರ ವರ್ಗಾಯಿಸಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಚರ್ಚಿಸ ಲಾಗಿದೆ ಎಂದು ಹೆಚ್. ಸುನೀಲ್ ‘ಜನತಾವಾಣಿ’ಗೆ ತಿಳಿಸಿದ್ದಾರೆ.

error: Content is protected !!