ಲಕ್ಕಿ ಡ್ರಾ ನೆಪದಲ್ಲಿ 2 ಲಕ್ಷಕ್ಕೂ ಅಧಿಕ ಹಣ ವಂಚನೆ

ದಾವಣಗೆರೆ, ಅ.6- ಆನ್ ಲೈನ್ ಶಾಪಿಂಗ್ ಕಂಪನಿಯ ಅಧಿಕಾರಿ ಹೆಸರಿನಲ್ಲಿ ಲಕ್ಕಿ ಡ್ರಾ ನೆಪದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಮೂಲಕ ದೋಚಿ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚನ್ನಗಿರಿ ಪಟ್ಟಣದ ಉಪ್ಪಾರಪೇಟೆಯ ಸಿ.ಹೆಚ್. ವೆಂಕಟೇಶ ವಂಚನೆಗೊಳಗಾದವರು. 

ನ್ಯಾಪ್ಟಾಲ್ ಆನ್ ಲೈನ್ ಶಾಪಿಂಗ್ ಕಂಪನಿ ಹೆಸರಿನಲ್ಲಿ ಮನೆ ವಿಳಾಸಕ್ಕೆ ನನ್ನ ಹೆಸರಿಗೆ ಬಂದಿದ್ದ ಪೋಸ್ಟ್ ನೋಡಿದಾಗ ಮಹೀಂದ್ರ ಕಂಪನಿಯ ಕಾರು ಬಹುಮಾನವಾಗಿ ಗೆದ್ದಿರುವುದಾಗಿ ಬರೆಯಲಾಗಿತ್ತು. ಅದರಲ್ಲಿದ್ದ ಸಹಾಯವಾಣಿ ಅಧಿಕಾರಿಯ ಮೊಬೈಲ್  ನಂಬರ್ ಗೆ ಸಂಪರ್ಕಿಸಿದಾಗ ಮಾತನಾಡಿದ ಅಪರಿಚಿತನು, ತಾನು ರಾಘವೇಂದ್ರ ಎಂಬುದಾಗಿ ಪರಿಚಿತನಾಗಿ ಕಾರು ಬಹುಮಾನವಾಗಿ ಬಂದಿದ್ದು, ಕಾರು ಬೇಡವೆಂದರೆ 14 ಲಕ್ಷದ 80 ಸಾವಿರ ರೂ. ಪಡೆಯಬಹುದು. ಹಣವನ್ನು  ಪಡೆಯಲು ಶೇ. 1ರಷ್ಟು ಕಮೀಷನ್ ಹಣವಾಗಿ 14 ಸಾವಿರದ 800 ಕಟ್ಟಬೇಕೆಂದು ನಂಬಿಸಿದನು. ಮೊಬೈಲ್ ವಾಟ್ಸಾಪ್ ಗೆ ಅಪರಿಚಿತನು ಬ್ಯಾಂಕ್ ಖಾತೆ ನಂಬರ್ ಕಳಿಸಿ ಬಹುಮಾನದ ಹಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ತೆರಿಗೆ, ಜಿಎಸ್ ಟಿ ಎಂದು 2 ಲಕ್ಷಕ್ಕೂ ಅಧಿಕ ಹಣ ಕಟ್ಟಬೇಕೆಂದಾಗ ಹಂತ ಹಂತವಾಗಿ ಆನ್ ಲೈನ್ ಮೂಲಕ ಅಪರಿಚಿತ ನೀಡಿದ್ದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಯಿತು. ಲಕ್ಕಿ ಡ್ರಾ ನೆಪದಲ್ಲಿ  ವಂಚಿಸಿರುವುದಾಗಿ ವೆಂಕಟೇಶ್ ದೂರಿದ್ದಾರೆ.

error: Content is protected !!