ದಾವಣಗೆರೆ, ಜೂ.21- ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಟೀ ವ್ಯಾಪಾರಿಯ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.
ವಿನೋಬನಗರದ ಎಚ್.ಜಿ. ಪ್ರಕಾಶ್ (50) ಆರ್ ಟಿಒ ಕಛೇರಿ ಮುಂದೆ ಟೀ ಅಂಗಡಿ ನಡೆಸುತ್ತಿದ್ದರು. ಲಾಕ್ ಡೌನ್ ಪರಿಣಾಮ ಮೂರು ತಿಂಗಳಿನಿಂದ ಟೀ ಅಂಗಡಿ ಮುಚ್ಚಿದ ಪರಿಣಾಮ ದುಡಿಮೆಯಿಲ್ಲದೇ ಸಾಲ ಮಾಡಿಕೊಂಡಿದ್ದ. ಇದರಿಂದ ನೊಂದು ಸೂಳೆಕೆರೆಯಲ್ಲಿ ಶನಿವಾರ ಸಂಜೆ ಡೆತ್ ನೋಟ್ ಬರೆದಿಟ್ಟು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೆರೆಯಲ್ಲಿ ಈತನ ಶವಕ್ಕಾಗಿ ಭಾನುವಾರ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆ ಈತನ ಶವ ನೀರಿನಲ್ಲಿ ತೇಲಿದ್ದು ಕಂಡು ಬಂದಿದೆ. ಅಗ್ನಿ ಶಾಮಕ, ಈಜುಗಾರರ ಸಹಾಯದಿಂದ ಮೃತ ದೇಹವನ್ನು ಕೆರೆಯಿಂದ ಹೊರ ತರಲು ಕಾರ್ಯಾಚರಣೆ ನಡೆಸಲಾಗಿದೆ.