ಹರಿಹರ, ಜೂ.14- ಗೋದಾಮಿನಲ್ಲಿ ಸಂಗ್ರಹಿಸಿದ್ದ ಭತ್ತ ತೋರಿಸಿ ಸಾಲ ಪಡೆದು ನಂತರ ಬ್ಯಾಂಕ್‌ಗೆ ತಿಳಿಯ ದಂತೆ ಅಡಮಾನವಿಟ್ಟ ಭತ್ತ ಮಾರಾಟ ಮಾಡಿಕೊಂಡು ಇಲ್ಲಿನ ಕೆನರಾ ಬ್ಯಾಂಕ್‌ಗೆ ನಾಲ್ಕೂವರೆ ಕೋಟಿ ರೂ. ಪಂಗನಾಮ ಹಾಕಿರುವ 9 ಜನರ ತಂಡದ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿವರ: ಉತ್ತಮ ಬೆಲೆ ನಿರೀಕ್ಷೆ, ಮತ್ತಿತರೆ ಕಾರಣಗಳಿ ಗಾಗಿ ರೈತರು ಗೋದಾಮಿನಲ್ಲಿ ಸಂಗ್ರಹಿಸಿಡುವ ಕೃಷಿ ಉತ್ಪ ನ್ನಗಳನ್ನು ಅಡಮಾನವಿಟ್ಟುಕೊಂಡು ಅದರ ಶೇ.75 ರಷ್ಟು ಮೌಲ್ಯದ ಸಾಲ ಸೌಕರ್ಯ ನೀಡಲು ಕೆನರಾ ಬ್ಯಾಂಕ್ ನ್ಯಾಷನಲ್ ಕೊಲ್ಯಾಟರಲ್ ಮ್ಯಾನೇಜ್‌ಮೆಂಟ್ ಸರ್ವೀಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಅದರಂತೆ ತಾಲ್ಲೂಕಿನ ನಂದಿತಾವರೆ ಸಮೀಪದ ಎಸ್.ಕೆ.ಇಂಡಸ್ಟ್ರೀಸ್ ರೈಸ್‌ಮಿಲ್‌ನ ಗೋದಾಮಿ ನಲ್ಲಿಟ್ಟಿದ್ದ ಭತ್ತ ಆಧರಿಸಿ ಮಲೇಬೆನ್ನೂರಿನ ಮೆಹಬೂಬ್ ಸಾಬ್ 49.5 ಲಕ್ಷ ರೂ, ಶಹತಾಜ್ ಬಾನು 50 ಲಕ್ಷ, ಸೈಯಿದಾ ರಿಹಾನಾ 50 ಲಕ್ಷ, ಸೈಯದ್ ನಿಸಾರ್ ಅಹ್ಮದ್ 50 ಲಕ್ಷ, ಶಾಹನೀಘರ್ 50 ಲಕ್ಷ, ಸೈಯದ್ ಅಲ್ತಾಫ್ ಅಹ್ಮದ್ ಎಂ. 50 ಲಕ್ಷ, ಹರಿಹರ ತಾಲ್ಲೂಕು ನಿಟ್ಟೂರಿನ ಅಲ್ಲಾಬಕ್ಷ್ 50 ಲಕ್ಷ, ರಾಣೇಬೆನ್ನೂರು ತಾಲ್ಲೂಕು ಮುದೇನೂರಿನ ಮಂಜುನಾಥ ಪುಟ್ಟಕ್ಕ ನವರ್ 50 ಲಕ್ಷ, ಶಿವಮೊಗ್ಗದ ವಿನಾಯಕ ಪಾರ್ಕ್ ಬಳಿಯ ಸೈಯದ್ ಜಮೀಲ್ 50 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಪಡೆದಿದ್ದ ಸಾಲವನ್ನು ತೀರುವಳಿ ಮಾಡದೆ, ಬ್ಯಾಂಕ್ ಅಧಿಕಾರಿಗಳಿಗೂ ತಿಳಿಸದೆ 2018ರ ಸೆಪ್ಟೆಂಬರ್ ಕೊನೆ ವಾರ ಇವರೆಲ್ಲಾ ಭತ್ತ ಮಾರಾಟ ಮಾಡಿಕೊಂಡು ಬ್ಯಾಂಕ್‌ಗೆ ವಂಚನೆ ಮಾಡಿದ್ದಾರೆಂದು ಮ್ಯಾನೇಜರ್ ಅಚ್ಯುತನ್ ದೂರಿನಲ್ಲಿ ವಿವರಿಸಿದ್ದಾರೆ. ಐಪಿಸಿ ಕಲಂ 409, 420 (34)ರಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.