ರಸ್ತೆ ಅಪಘಾತದಲ್ಲಿ ತಂದೆ – ಮಗಳ ಸಾವು

ದಾವಣಗೆರೆ, ಜೂ.8- ಮೋಟಾರ್ ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ತಂದೆ -ಮಗಳು ಸಾವಿಗೀಡಾಗಿರುವ ಘಟನೆ ನಗರದ ಕೈಗಾರಿಕಾ ಪ್ರದೇಶ ಸಮೀಪದ ದಾವಣಗೆರೆ-ಲೋಕಿಕೆರೆ ರಸ್ತೆಯಲ್ಲಿ ನಡೆದಿದೆ. 

ತುರ್ಚಘಟ್ಟದ ಸಿದ್ದೇಶ್ (29) ಹಾಗೂ 3 ವರ್ಷದ ಮಗಳು ಪ್ರಿಯಾಂಕ ಮೃತಪಟ್ಟಿರುವ ರ್ದುದೈವಿಗಳು. 5 ವರ್ಷದ ಕೀರ್ತನಾ ಗಾಯಗೊಂಡಿದ್ದಾಳೆ.

ಮೃತ ಸಿದ್ದೇಶ್ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ತುರ್ಚಘಟ್ಟದಿಂದ ದಾವಣಗೆರೆಗೆ ಆಸ್ಪತ್ರೆಗೆಂದು ಬೈಕ್ ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ತುರ್ಚಘಟ್ಟ ಗ್ರಾಮದ ಕಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್ ನಡುವೆ ಅಪಘಾತ ನಡೆದಿದೆ. ಪರಿಣಾಮ  ಸಿದ್ದೇಶ್ ಸ್ಥಳದಲ್ಲೇ ಮೃತಪಟ್ಟರೆ, ಮಗಳು ಪ್ರಿಯಾಂಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಅಪಘಾತದಿಂದ ಎರಡು ಬೈಕ್ ಗಳು ಜಖಂಗೊಂಡಿವೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಡಿವೈಎಸ್‍ಪಿ ವಿ. ನರಸಿಂಹ ಹಾಗೂ ಹದಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!