ದಾವಣಗೆರೆ, ಜೂ.1- ಬೈಕ್ ಮತ್ತು ಲಗೇಜ್ ಆಟೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮದುವೆಗೆ ಹೋಗುತ್ತಿದ್ದ ಸವಾರ ರಿಬ್ಬರೂ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹೆಬ್ಬಾಳ್ ಟೋಲ್- ಹುಣಸೇಕಟ್ಟೆ ಮಧ್ಯ ಇಂದು ಬೆಳಗ್ಗೆ ಸಂಭವಿಸಿದೆ.
ತಾಲ್ಲೂಕಿನ ಅಣಬೇರು ಗ್ರಾಮದ ಮಹಾಬಲೇಶ್ (45) ಮತ್ತು ನಲ್ಕುಂದ ಗ್ರಾಮದ ಈಶ್ವರಪ್ಪ (50) ಮೃತ ದುರ್ದೈವಿ ಗಳು. ಇವರು ಅಳಿಯ-ಮಾವ ಎನ್ನಲಾಗಿದೆ.
ನಲ್ಕುಂದ ಗ್ರಾಮದಿಂದ ಜಗಳೂರು ತಾಲ್ಲೂಕಿನ ಕಾಟಿಹಳ್ಳಿ ಗ್ರಾಮಕ್ಕೆ ಮದುವೆಗೆ ಇಬ್ಬರೂ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ-48ರ ಚಿತ್ರದುರ್ಗ-ದಾವಣಗೆರೆ ರಸ್ತೆ ಮು ಖಾಂತರ ಸಾಗುತ್ತಿದ್ದಾಗ, ಹಿಂಬದಿಯಿಂದ ಆಪೆ ಆಟೋ ಡಿಕ್ಕಿಪಡಿಸಿದೆ. ಪರಿಣಾಮ ಬೈಕ್ ನ ಹಿಂಬದಿ ಸವಾರ ಈಶ್ವರಪ್ಪ ಸೇತುವೆ ಮೇಲಿನಿಂದ ಸುಮಾರು 10 ಅಡಿ ಆಳಕ್ಕೆ ಬಿದ್ದು ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಚಾಲಕ ಮಹಾಬಲೇಶ್ ಚಿಕಿತ್ಸೆ ಫಲಿಸದೇ ಎಸ್. ಎಸ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.