ದಾವಣಗೆರೆ, ಮೇ 16- ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರೋರ್ವರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 1 ಲಕ್ಷದ 98 ಸಾವಿರವನ್ನು ಆನ್ ಲೈನ್ ಮುಖಾಂತರ ದೋಚಿರುವ ಘಟನೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ಸರಸ್ವತಿ ನಗರ ಬಡಾವಣೆ ವಾಸಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ಚಿದಾನಂದ ಎನ್. ಯಮಕ್ಕನವರ ಹಣ ಕಳೆದುಕೊಂಡವರು.
ಬಡಾವಣೆಯಲ್ಲಿನ ಬ್ಯಾಂಕ್ ಒಂದರ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಬ್ಯಾಂಕ್ ಖಾತೆಯಿಂದ 99 ಸಾವಿರ ರೂ. ಕಡಿತವಾದ ಬಗ್ಗೆ ಮೊಬೈಲ್ ಗೆ ಮೆಸೇಜ್ ಬಂದ ನಂತರದಲ್ಲಿ ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದಾರೆ. ಎರಡನೇ ಬಾರಿ ಸಹ 99 ಸಾವಿರ ಕಡಿತವಾಗಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಮೊಬೈಲ್ ಗೆ ಯಾವುದೇ ಮೆಸೇಜ್ ಬಂದಿಲ್ಲ. ಈ ಖಾತೆಗೆ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಪಡೆದಿದ್ದರೂ ಉಪಯೋಗಿಸಿಲ್ಲ. ಬ್ಯಾಂಕ್ ಖಾತೆ ವಿವರ ಮತ್ತು ಡೆಬಿಟ್ ಕಾರ್ಟ್ ಮಾಹಿತಿಯನ್ನು ಯಾರ ಬಳಿಯೂ ಹಂಚಿಕೊಂಡಿಲ್ಲ. ಆದರೂ ಈ ಗೌಪ್ಯ ವಿವರಗಳು ಸೋರಿಕೆ ಯಾಗಿ ಖಾತೆಯಲ್ಲಿನ ಹಣ ಕಡಿತವಾಗಿದೆ ಎಂದು ದೂರು ನೀಡಿದ್ದಾರೆ.