ದಾವಣಗೆರೆ, ಡಿ.13- ಕಂಪನಿ ನೇಮಕಾತಿ ಅಧಿಕಾರಿ ಸೋಗಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿನಿಗೆ ಸುಮಾರು 2.29 ಲಕ್ಷ ಹಣವನ್ನು ಆನ್ ಲೈನ್ ಮುಖೇನ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆವರಗೆರೆ ಬಾಡಾ ಕ್ರಾಸ್ನ ಪೊಲೀಸ್ ಲೇಔಟ್ ನ ಸಹನಾ ವಂಚನೆಗೊಳಗಾದ ವಿದ್ಯಾರ್ಥಿನಿ. ತನ್ನ ಮೊಬೈಲ್ಗೆ ಕಂಪನಿಯೊಂದರ ಹೆಸರಿನಲ್ಲಿ ಸಂದೇಶ ಬಂದಿದ್ದು, ಕಂಪನಿಯ ನೇಮಕಾತಿ ಅಧಿಕಾರಿಯೆಂದು ಹೇಳಿದ ಅಪರಿಚಿತನು, ಮನೆಯಲ್ಲಿ ಕೆಲಸ ಮಾಡಿ 8 ಸಾವಿರವರೆಗೆ ಗಳಿಸಬಹುದೆಂದು ನಂಬಿಸಿ, ಆಸಕ್ತಿ ಇದ್ದರೆ ವಾಟ್ಸಾಪ್ ಮಾಡುವಂತೆ ಲಿಂಕ್ ಕಳಿಸಿದ. ಅದರಂತೆ ಮಾಡಿದಾಗ ಈ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
December 24, 2024