ದಾವಣಗೆರೆ, ಮಾ.26- ಈಜಲು ಹೋಗಿ ಹೊಳೆಯಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ನಡೆದಿದೆ. ಹರ್ನಾಳು ಗ್ರಾಮದ ಅರುಣ (22) ಸಾವನ್ನಪ್ಪಿದ ಯುವಕ.
ಕಡತಿ ಗ್ರಾಮದಲ್ಲಿ ಗುರುವಾರ ಜಾತ್ರೆ ಇದ್ದ ಹಿನ್ನೆಲೆಯಲ್ಲಿ ಜಾತ್ರೆಗೆ ಯುವಕ ಬಂದಿದ್ದ. ಕಡತಿ ಗ್ರಾಮದ ಪಕ್ಕದಲ್ಲಿರುವ ತುಂಗಭದ್ರಾ ಹೊಳೆಯಲ್ಲಿ ಈಜಲು ಹೋದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಯುವಕನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರು. ಬಹಳ ಸಮಯದ ನಂತರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹಲವಾಗಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವಕನ ಮೃತದೇಹವನ್ನು ನೋಡಿ ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.