ದಾವಣಗೆರೆ, ಮಾ.22- ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಗ್ರಾಪಂ ಸದಸ್ಯನಿಗೆ ಚಾಕು ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ನ್ಯಾಮತಿ ತಾಲ್ಲೂಕಿನ ಚೀಲೂರಿನಲ್ಲಿ ನಡೆದಿದೆ.
ಕೆಂಗೋಟೆ ಗ್ರಾಪಂ ಸದಸ್ಯ ನಾಗರಾಜ್ ನಾಯ್ಕ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ ರಾಕೇಶ್, ದರ್ಶನ್ ಈ ಇಬ್ಬರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ರಾಕೇಶ್ ಮತ್ತು ನಾಗರಾಜ್ ನಾಯ್ಕ್ ಮಧ್ಯೆ ಹಿಂದೆ ಸಣ್ಣ ಗಲಾಟೆ ನಡೆದಿತ್ತು. ಇದೇ ದ್ವೇಷದಿಂದ ಆರೋಪಿತರು ನಾಗರಾಜ್ ನಾಯ್ಕ್ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದರು ಎನ್ನಲಾಗಿದ್ದು, ತೀವ್ರ ಗಾಯವಾಗಿರುವುದರಿಂದ ನಾಗರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.