ದಾವಣಗೆರೆ, ಆ.4- ತಿಪ್ಪೆಯಲ್ಲಿ ಮಲಗಿದ್ದ ಸುಮಾರು 20 ರಿಂದ 25 ಸಾಕು ಹಂದಿಗಳನ್ನು ಮಧ್ಯರಾತ್ರಿ ವೇಳೆ ಕಳವು ಮಾಡಿ ವಾಹನದಲ್ಲಿ ಹೊತ್ತೊಯ್ದಿರುವ ಘಟನೆ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ನಡೆದಿದೆ. ನಿಟ್ಟುವಳ್ಳಿ ರಾಜೇಶ್ವರಿ ಬಡಾವಣೆ 1ನೇ ಕ್ರಾಸ್ ಲೆನಿನ್ ನಗರದ ಎನ್. ಚಂದ್ರು ಎಂಬುವರಿಗೆ ಸೇರಿದ 20 ರಿಂದ 25 ಸಾಕು ಹಂದಿಗಳನ್ನು ಸಿದ್ದಗಂಗಾ ಶಾಲೆ ಹಿಂಭಾಗದ ತಿಪ್ಪೆಯಲ್ಲಿ ಮಲಗಿದ್ದಾಗ ಕಳವು ಮಾಡಲಾಗಿದೆ.
ಕಳ್ಳರು ಒಂದು ಬಿಳಿ ಬಣ್ಣದ ಬೋಲೆರೋ ಪಿಕ್ ಅಪ್ ವಾಹನವನ್ನು ನಿಲ್ಲಿಸಿಕೊಂಡು ತಿಪ್ಪೆಯಲ್ಲಿ ಮಲಗಿರುವ ಹಂದಿಗಳನ್ನು ಹಿಡಿದು ವಾಹನಕ್ಕೆ ತುಂಬಿಸುತ್ತಿದ್ದು ಕಂಡುಬಂತು. ಆಗ ನಾನು ಜೋರಾಗಿ ಕೂಗಿಕೊಂಡಾಗ ಕಳ್ಳರು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋದರು ಎಂದು ಹಂದಿ ಮಾಲೀಕ ಚಂದ್ರು ದೂರಿನಲ್ಲಿ ವಿವರಿಸಿದ್ದಾರೆ.