ಹೂವಿನಹಡಗಲಿ, ಮಾ.16- ಎಪಿಎಂಸಿ ಬಳಿ ಇರುವ ಎಸ್.ಆರ್. ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿ ಪೊಲೀಸ್ ಕಾನ್‌ಸ್ಟೇಬಲ್ ಹೆಚ್.ಎಂ. ಶಿವಕುಮಾರಸ್ವಾಮಿ (43) ಮೃತಪಟ್ಟಿದ್ದಾರೆ.
ಶಿವಕುಮಾರ್ ತಮ್ಮ ಸ್ವಗ್ರಾಮ ಹೊಳಲಿಗೆ ತೆರಳುತ್ತಿದ್ದು, ಎದುರಿಗೆ ಇನ್ನೊಂದು ಮೋಟಾರು ಸೈಕಲ್‌ನಲ್ಲಿ ರಭಸವಾಗಿ ಬಂದ ಯುವಕ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಮೃತ ಶಿವಕುಮಾರ ಸ್ವಾಮಿ ತಂದೆ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಹಡಗಲಿ ಠಾಣೆಯಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವಾಗಲೂ ಹೆಲ್ಮೆಟ್ ಧರಿಸುತ್ತಿದ್ದರು. ಬೆಲ್ಟ್ ಹಾಕಿರದ ಕಾರಣ ತಲೆಗೆ ಬಲವಾದ ಪೆಟ್ಟು ಬಿದ್ದು, ದುರ್ಮರಣಕ್ಕೀಡಾಗಿದ್ದಾರೆ. ಸಿಪಿಐ ಮತ್ತು ಪಿಎಸ್‌ಐ ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.