ದಾವಣಗೆರೆ, ಮಾ.16 ಹೊಟ್ಟೆ ನೋವಿನ ಹಿನ್ನೆಲೆ ತಾಯಿ ತನ್ನ 11 ತಿಂಗಳ ಮಗು ಸಹಿತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಶ್ವೇತಾ (28), ಜಾಹ್ನವಿ ಆತ್ಮಹತ್ಯೆಗೆ ಶರಣಾದವರು. ತಾಯಿ ಶ್ವೇತಾಳಿಗೆ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆ ಬಾಧಿಸುತ್ತಿತ್ತು. ನೋವು ಸಹಿಸಲಾರದೇ ತನ್ನ ಹೆಣ್ಣು ಮಗುವಿಗೆ ನೇಣು ಬಿಗಿದು ತಾನೂ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.