ದಾವಣಗೆರೆ, ಮಾ.16- ಪಾದಚಾರಿ ಮಹಿಳೆಯೋರ್ವರ ಬಂಗಾರದ ಮಾಂಗಲ್ಯ ಸರವನ್ನು ಕಳ್ಳರು ಬೈಕ್ನಲ್ಲಿ ಬಂದು ಅಪಹರಿಸಿರುವ ಘಟನೆ ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ರಾತ್ರಿ ನಡೆದಿದೆ.
ಶರಣಮ್ಮ ಎಂಬುವರು ಸೊಸೈಟಿಯಿಂದ ವಾಪಸ್ ಮನೆ ಕಡೆಗೆ ಇಲ್ಲಿನ ವಿನೋಬನಗರ 4ನೇ ಮೇನ್ ಹಾಗೂ 3ನೇ ಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಲ್ಸರ್ ಬೈಕ್ನಲ್ಲಿ ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಿ ಬಂದಿದ್ದ ಕಳ್ಳರು ಬೈಕ್ನ ಲೈಟ್ ಬೆಳಕನ್ನು ಮುಖಕ್ಕೆ ಹರಿಸಿದ್ದು, ಇದರಿಂದ ಆಕೆಗೆ ಕಣ್ಣು ಮಂಜಾಗಿದ್ದು, ಕೊರಳಿಗೆ ಕೈ ಹಾಕಿ ಅಂದಾಜು 1.50 ಲಕ್ಷ ರೂ. ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.