ಕೂಡ್ಲಿಗಿ, ಮಾ.12- ಹೊಲದಲ್ಲಿನ ಪಂಪ್‌ಸೆಟ್ ಆನ್ ಮಾಡಿದ್ದರಿಂದ ಪೈಪ್‌ಲೈನ್‌ಗೆ ಹಾಕಲಾಗಿದ್ದ ಟಿ ಕ್ಯಾಪ್, ರಭಸದ ಗಾಳಿಗೆ ಆಕಸ್ಮಿಕವಾಗಿ ಹಣೆಗೆ ಸಿಡಿದು ಬಾಲಕ ಗಾಯಗೊಂಡು ನಂತರ ಬಳ್ಳಾರಿ ವಿಮ್ಸ್‌ನಲ್ಲಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗೋವಿಂದಗಿರಿ ಗೊಲ್ಲರಹಟ್ಟಿಯ ನವೀನ್‌ಕುಮಾರ (13) ಸಾವನ್ನಪ್ಪಿರುವ ದುರ್ದೈವಿ ಬಾಲಕನಾಗಿದ್ದಾನೆ. ಈತ ಮಂಗಳವಾರ ಬೆಳಿಗ್ಗೆ ತನ್ನ ಮಾವನೊಂದಿಗೆ ಹೊಲದಲ್ಲಿನ ಬೆಳೆಗೆ ನೀರು ಹಾಯಿಸಲು ಪಂಪ್‌ಸೆಟ್ ಆನ್ ಮಾಡಿ ಪೈಪ್‌ಲೈನ್‌ಗೆ ಅಳವಡಿಸಿರುವ ಟಿ ಕ್ಯಾಪ್ ಬಿಚ್ಚುವಾಗ ಈ ಘಟನೆ ಜರುಗಿದೆ.
ನವೀನ್ ಗುರುವಾರ ಬೆಳಿಗ್ಗೆ ವಿಮ್ಸ್ ನಲ್ಲಿ ಸಾವನ್ನಪ್ಪಿದ್ದು, ಮಧ್ಯಾಹ್ನ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಮೃತ ಬಾಲಕನ ತಾಯಿ ಗೌರಮ್ಮ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.