ದಾವಣಗೆರೆ, ಮಾ.9- ಗಾಂಜಾ ಮಾರಾಟ ಮತ್ತು ಸೇವನೆಗೆ ಅವಕಾಶ ನೀಡಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ವಿದ್ಯಾನಗರ ಪೊಲೀಸರು 7 ಮಂದಿಯನ್ನು ಬಂಧಿಸಿ 70 ಸಾವಿರ ಮೌಲ್ಯದ 4 ಕೆ.ಜಿ. 522 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಶಂಕರ್ ವಿಹಾರ್ ಲೇಔಟ್ ನ ಚಂದ್ರಶೇಖರ್ (27), ದೇವರಾಜ್ ಅರಸ್ ಬಡಾವಣೆ ಎ ಬ್ಲಾಕ್ 7ನೇ ಕ್ರಾಸ್ ನ ಶಾರೀಕ್ (29), ವಿದ್ಯಾನಗರದ ಹೆಚ್. ಸತೀಶ್ ಕುಮಾರ್, ಹಾವೇರಿ ಜಿಲ್ಲೆಯ ಗುರುದತ್ತ ಅಲಿಯಾಸ್ ಗುರು (29), ರಾಯಚೂರು ಜಿಲ್ಲೆ ಕರಡಿಗುಡ್ಡ ಗ್ರಾಮದ ಶಿವಕುಮಾರ್ ಅಲಿಯಾಸ್ ಶಿವು (25), ಅರ್ಜುನ್ ನಾಯಕ್ (26), ರಾಯಚೂರು ಜಿಲ್ಲೆ ಬಂಗಾಳಿ ಕ್ಯಾಂಪ್ ನ ಶಿವಶಂಕರ್ ಗಾಯಿನ್ (34) ಬಂಧಿತರು.
ನಗರದ ಕುಂದುವಾಡ ರಸ್ತೆ ಬಸವೇಶ್ವರ ಬಡಾವ ಣೆಯ ಮನೆಯೊಂದರ 2ನೇ ಮಹಡಿಯ ರೂಂನಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನು ಮಾಡಿ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಮಾರ್ಗದರ್ಶನದಲ್ಲಿ ದಕ್ಷಿಣ ವೃತ್ತ ಸಿಪಿಐ ಗುರುಬಸವರಾಜ್, ವಿದ್ಯಾನಗರ ಪೊಲೀಸ್ ಠಾಣೆ ಪಿಎಸ್ಐ ರೂಪ ತೆಂಬದ್ ಮತ್ತು ಸಿಬ್ಬಂದಿಗಳಾದ ಮಂಜುನಾಥ, ನರೇಂದ್ರ ಸ್ವಾಮಿ, ಗೋಪಿನಾಥ ನಾಯ್ಕ, ಗಿರಿಧರ್ ನಾಯ್ಕ, ಬಸವರಾಜ, ಯೋಗೀಶ್ ನಾಯ್ಕ, ಮಂಜುನಾಥ, ಗುಡ್ಡಪ್ಪ, ಆನಂದ್, ಮಂಜುನಾಥ ಒಳಗೊಂಡ ತಂಡ ದಾಳಿ ಮಾಡಿದೆ.