ಮೂವರ ಬಂಧನ : ಗೂಡ್ಸ್ ಆಟೋ-ನೈಲಾನ್ ರಬ್ಬರ್ ಬೆಲ್ಟ್ ವಶ

ಹೊನ್ನಾಳಿ, ಏ.27- ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು ಕಳ್ಳತನವಾಗಿದ್ದ ಆಪೇ ಗೂಡ್ಸ್ ಆಟೋ ಮತ್ತು ನೈಲಾನ್ ರಬ್ಬರ್ ಬೆಲ್ಟ್ ವಶಪಡಿಸಿಕೊಂಡಿದ್ದಾರೆ.

ಹೊನ್ನಾಳಿ ತಾಲ್ಲೂಕು ಸೊರಟೂರು ಗ್ರಾಮದ ಕೂಲಿ ಕಾರ್ಮಿಕರುಗಳಾದ ಹನುಮಂತ, ಮಂಜುನಾಥ, ಪವನ ಬಂಧಿತರು. 

ಚನ್ನಗರಿ ಪೊಲೀಸ್ ಉಪಾಧೀಕ್ಷಕ ಡಾ. ಸಂತೋಷ್ ಮಾರ್ಗದರ್ಶನದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ನೇತೃತ್ವದಲ್ಲಿ ಹೊನ್ನಾಳಿ ಪಿಎಸ್‍ಐ ಬಸವರಾಜ್ ಬಿರಾದಾರ್ ಮತ್ತು ಸಿಬ್ಬಂದಿಗಳಾದ ಫೈರೋಜ್ ಖಾನ್, ವೆಂಕಟರಮಣ, ಶಂಕರಗೌಡ, ಶಾಂತಕುಮಾರ, ಜಗದೀಶ, ಚೇತನ್ ಕುಮಾರ್, ರಾಮಚಂದ್ರ ಒಳಗೊಂಡ ತಂಡವು ಈ ಕಳವು ಪ್ರಕರಣ ಬೇಧಿಸಿದೆ.

ಕಾರು ಕಳ್ಳರ ಬಂಧನ : ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು, ಕಾರನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ವಿನೋಬನಗರ 13 ನೇ ಕ್ರಾಸ್ 3ನೇ ಮೇನ್ ನ ಕೂಲಿ ಕಾರ್ಮಿಕ ಸುಫೀಯಾನ್ ಖಾನ್, ದೇವರಾಜ್ ಅರಸ್ ಬಡಾವಣೆ ಶಂಕರ್ ಲೇಔಟ್ ವಾಸಿ ರಿಲಾಯನ್ಸ್ ಕಂಪನಿಯಲ್ಲಿ ಟೀಮ್ ಲೀಡರ್ ಎಂ.ಕೆ. ಅಲಿ ಬಂಧಿತರು.

error: Content is protected !!