ದಾವಣಗೆರೆ, ಮಾ.3- ಸರ್ಕಾರಿ ಬಸ್ ಹರಿದ ಪರಿಣಾಮ ತಂದೆಯೊಡನೆ ರಸ್ತೆ ದಾಟುತ್ತಿದ್ದ ಬಾಲಕಿಯೋರ್ವಳು ಭೀಕರ ವಾಗಿ ಸಾವನ್ನಪ್ಪಿರುವ ಘಟನೆ ಗುತ್ತೂರಿನ ಹರಿಹರ-ಹರಪನ ಹಳ್ಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕು ಗುಳುಬಾಳ ಗ್ರಾಮದ ವಾಸಿ, ಇಟ್ಟಗಿಭಟ್ಟಿ ಕೆಲಸಗಾರ ಸಂಜು ಕುಮಾರ ಅಂಕುಶರಾಯ್ ಗತ್ತ ರಗಿ ಅವರ ಪುತ್ರಿ ಭಾಗ್ಯಶ್ರೀ (6) ಮೃತ ಬಾಲಕಿ. ಹರಿಹರದ ಕಡೆ ಯಿಂದ ಬಂದ ಕೆಎಸ್ಆರ್‌ಟಿಸಿ ಬಸ್ ಭಾಗ್ಯಶ್ರೀಗೆ ಡಿಕ್ಕಿ ಹೊಡೆದಿತ್ತು. ಆಕೆಯ ತಲೆ ಮೇಲೆ ಬಸ್ ನ ಹಿಂಬದಿ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿಯೇ ಬಾಲಕಿ ಧಾರುಣವಾಗಿ ಸಾವನ್ನಪ್ಪಿದ್ದಾಳೆ.
December 28, 2024