ದಾವಣಗೆರೆ, ಫೆ.28- ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದ ಮೇಲೆ ಪ್ರತ್ಯೇಕ ಎರಡು ಕಡೆ ದಾಳಿ ನಡೆಸಿರುವ ಮಲೇಬೆನ್ನೂರು ಪೊಲೀಸರು 8 ಮಂದಿಯನ್ನು ಬಂಧಿಸಿ, ಹದಿನೇಳುವರೆ ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಮೂವರ ಬಂಧನ: ಹಾಲಿವಾಣ ಗ್ರಾಮದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ದಾಳಿ ನಡೆಸಿ, 3,550 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಹರಿಹರ ತಾಲ್ಲೂಕು ಹಾಲಿವಾಣ ಗ್ರಾಮದ ಕೆ. ನಾಗರಾಜ, ನಾಗರಾಜ, ಚನ್ನಗಿರಿ ತಾಲ್ಲೂಕು ಹರಲೀಪುರ ಗ್ರಾಮದ ಬಸವರಾಜ ಬಂಧಿತರು.
ಐವರ ಬಂಧನ: ಭಾನುವಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ದಾಳಿ ನಡೆಸಿ, 14 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಭಾನು ವಳ್ಳಿಯ ನಾರಾಯಣಪ್ಪ, ಬಿ. ಪ್ರದೀಪ್, ಬನ್ನಿಕೋಡು ಗ್ರಾಮದ ರುದ್ರೇಶ್, ಎಂ.ಎಸ್. ನಟರಾಜ, ಕೆ. ಬೇವಿನಹಳ್ಳಿಯ ವೈ.ಎನ್.ಬಿ. ಬಸವರಾಜ್ ಬಂಧಿತರು.
ದಾವಣಗೆರೆ ಗ್ರಾಮಾಂ ತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ಸಿಪಿಐ ಯು. ಸತೀಶ್ಕುಮಾರ್, ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ ಕುಸಲಾಪುರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಕ್ಷ್ಮಣ್, ಬಸವರಾಜ್, ಸಂತೋಷ್ಕುಮಾರ್, ನಾಗಪ್ಪ ಕಡೇಮನಿ, ಮೂರ್ತಿ, ರಾಜಶೇಖರ್, ಮಲ್ಲಿಕಾರ್ಜುನ್, ಹನುಮಂತ ರೆಡ್ಡಿ, ಅಹ್ಮದ್ ಹುಸೇನ್ ಒಳಗೊಂಡ ತಂಡವು ದಾಳಿ ನಡೆಸಿದೆ.