ಚಳ್ಳಕೆರೆ, ಫೆ.26- ಚಾಲ ಕನ ನಿರ್ಲಕ್ಷ್ಯತನದಿಂದ ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ 13 ಜನರು ಗಾಯ ಗೊಂಡ ಘಟನೆ ನಗರದ ಬಳ್ಳಾರಿ ರಸ್ತೆ ಚಳ್ಳಕೇರಮ್ಮ ದೇವಸ್ಥಾನದ ಸಮೀಪ ನಡೆದಿದೆ. ಚಿಕ್ಕಮ್ಮನ ಹಳ್ಳಿ ಕಡೆಗೆ ಅತಿವೇಗವಾಗಿ ಬರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಗಾಯಾಳು ಗಳನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
February 28, 2025