ಮಾಸ್ಕ್‌ ಹಾಕು ಎಂದಿದ್ದಕ್ಕೆ ಪೊಲೀಸ್‌ಗೆ ಕಪಾಳಮೋಕ್ಷ

ಆರೋಪಿ ಬಂಧನ

ಕೂಡ್ಲಿಗಿ, ಏ.25- ಲಾಕ್‌ಡೌನ್ ವೇಳೆ ಬೈಕ್‌ ಸವಾರ ನೊಬ್ಬ ಮಾಸ್ಕ್‌ ಧರಿಸದೆ ಮೊಬೈಲ್‌ನಲ್ಲಿ ಮಾತನಾಡುತ್ತಿ ರುವಾಗ, ತಡೆದು ಮಾಸ್ಕ್‌ ಹಾಕು ಎಂದು ಹೇಳಿದ್ದಕ್ಕೆ ಪೇದೆಗೆ ಕಪಾಳಮೋಕ್ಷ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ವಾಸಿ ಪ್ರೇಮ್‌ಕುಮಾರ್‌ (30) ಎಂಬಾತನೇ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿದ್ದಾನೆ. 

ಕರ್ತವ್ಯನಿರತ ಪೇದೆಗೆ ಕಪಾಳಮೋಕ್ಷ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೂಡ್ಲಿಗಿ ಪಿಎಸ್‌ಐ ಸುರೇಶ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!