ಚನ್ನಗಿರಿ, ಫೆ.23- ಓಮಿನಿ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಣಿಗೆರೆ ಗ್ರಾಮದ ಬಳಿ ಇಂದು ರಾತ್ರಿ ಸಂಭವಿಸಿದೆ. ಮೆದಿಕೆರೆ ಗ್ರಾಮದ ರೇವಣಸಿದ್ದಪ್ಪ (22) ಸಾವನ್ನಪ್ಪಿದ ಸವಾರ. ರೇವಣಸಿದ್ದಪ್ಪ ದಾವಣಗೆರೆ ಕಡೆಯಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಎದುರಿಗೆ ಬಂದ ಓಮಿನಿಗೆ ಡಿಕ್ಕಿಯಾಗಿದೆ. ಓಮಿನಿ ವಾಹನದಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
March 15, 2025