ದಾವಣಗೆರೆ, ಜು.13- ಬಸವಾಪಟ್ಟಣ ಠಾಣಾ ವ್ಯಾಪ್ತಿಯ ಸೂಳೆಕೆರೆ ಸಿದ್ದನ ನಾಲೆಯಲ್ಲಿ ಅಪರಿಚಿತ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕಿಸಲಾಗಿದೆ.
ಮೃತದೇಹ ಗುರುತು ಪತ್ತೆ ಸಾಧ್ಯವಾಗದಷ್ಟು ಮುಖ ಜಜ್ಜಿರುವುದರಿಂದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಮಹಿಳೆ ಸುಮಾರು 25 ವರ್ಷಕ್ಕೂ ಮೇಲ್ಪಟ್ಟಿದ್ದು, ತೆಳು, ಬಿಳಿ ಬಣ್ಣದ ಮೈಕಟ್ಟಿದೆ. ಎಡಗೈ ಮಧ್ಯದ ಬೆರಳಿಗೆ ಉಂಗುರ ಹಾಕಿರುವ ಗುರುತು ಕಂಡುಬಂದಿದ್ದು, ಸೊಂಟಕ್ಕೆ ತಿಳಿಗೆಂಪು ಒಳಲಂಗ ಹಾಕಿದ್ದು ಅದಕ್ಕೆ ನೀಲಿದಾರ (ಲಾಡಿ) ಯಿಂದ ಕಟ್ಟಲ್ಪಟ್ಟಿದೆ.
ಸಂಬಂಧಪಟ್ಟವರು ಬಸವಾಪಟ್ಟಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.