ದಾವಣಗೆರೆ, ಏ.22- ಹಬ್ಬಕ್ಕೆಂದು ಮನೆಗೆ ಬೀಗ ಹಾಕಿ ತೆರಳಿದ್ದನ್ನು ಬಂಡವಾಳವಾಗಿಸಿಕೊಂಡು ಕನ್ನ ಹಾಕಿರುವ ಕಳ್ಳರು 35 ಸಾವಿರ ಮೌಲ್ಯದ 10 ಗ್ರಾಂ ಬಂಗಾರ, 39 ಸಾವಿರ ನಗದು ದೋಚಿರುವ ಘಟನೆ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರಿಹರ ತಾಲ್ಲೂಕು ಕಡರನಾಯ್ಕನ ಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ದೇವರಾಜ ಎಂಬಾತ ಕುಟುಂಬ ಸಮೇತ ರಾಣೇಬೆನ್ನೂರು ತಾ. ಐರಣಿ ಗ್ರಾಮದಲ್ಲಿನ ಹಬ್ಬಕ್ಕೆಂದು ಬುಧವಾರ ರಾತ್ರಿ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಈ ವೇಳೆ ಮನೆ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡಿರುವುದು ಇಂದು ಬೆಳಕಿಗೆ ಬಂದಿದೆ.
December 24, 2024