ದಾವಣಗೆರೆ, ಏ.22- ಬೇಕರಿಗೆ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ ಐದು ಲಕ್ಷ ನಗದನ್ನು ಹಾಡಹಗಲೇ ಕ್ಷಣಾರ್ಧದಲ್ಲಿ ದೋಚಿರುವ ಬಗ್ಗೆ ಇಲ್ಲಿನ ಕೆಟಿಜೆ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟುವಳ್ಳಿ ಹೊಸ ಬಡಾವಣೆ 8ನೇ ಕ್ರಾಸ್ ನ ಡಿ. ಸದಾಶಿವ ಎಂಬಾತ ಬುಧವಾರ ಮಧ್ಯಾಹ್ನ ತಮ್ಮ ಖಾತೆಯುಳ್ಳ ಬ್ಯಾಂಕಿನಿಂದ 5 ಲಕ್ಷ ಡ್ರಾ ಮಾಡಿಕೊಂಡು ಅದನ್ನು ತಮ್ಮ ದ್ವಿ ಚಕ್ರ ವಾಹನದ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ಸಾಗುತ್ತಿದ್ದರು. ಆಗ ಹೆಚ್.ಕೆ.ಆರ್ ವೃತ್ತದ ಬಳಿ ಬೇಕರಿಯೊಂದರ ಮುಂಭಾಗ ದ್ವಿಚಕ್ರ ವಾಹನ ನಿಲ್ಲಿಸಿ ಐಸ್ ಕ್ರೀಂ ತೆಗೆದುಕೊಂಡು ವಾಪಸ್ ಬಂದು ದ್ವಿಚಕ್ರ ವಾಹನದಲ್ಲಿ ಮನೆಯ ಬಳಿ ಹೋಗಿ ಡಿಕ್ಕಿಯಲ್ಲಿಟ್ಟ ಹಣವನ್ನು ನೋಡಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.