ದಾವಣಗೆರೆ, ಜು.10- ಮೋಸದಿಂದ ಕಾರು ತೆಗೆದುಕೊಂಡು ಹೋಗಿದ್ದ ಆರೋಪಿತನನ್ನು ಬಂಧಿಸಿ, ಕಾರು ವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿ ದ್ದಾರೆ. ಮೊಹಮ್ಮದ್ ಮುಸ್ತಾಕ್ ಅಲಿಯಾಸ್ ಮುಸ್ತು ಬಂಧಿತನು. ಕಳೆದ ಮಾರ್ಚ್ 14, 2020 ರಂದು ಕೆಟಿಜೆ ನಗರ 9ನೇ ಕ್ರಾಸ್, 3ನೇ ಮೇನ್ ವಾಸಿ, ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಶೇಖ್ ಆರಾಫತ್ ಎಂಬಾತನ ಕಾರನ್ನು ನಂಬಿಸಿ, ಮೋಸದಿಂದ ತೆಗೆದು ಕೊಂಡು ಹೋಗಿದ್ದ. ಕೆಟಿಜೆ ನಗರ ವೃತ್ತ ಸಿಪಿಐ ಹೆಚ್.ಗುರುಬಸವರಾಜ್ ನೇತೃತ್ವದಲ್ಲಿ ಪಿಎಸ್ಐ ಅಬ್ದುಲ್ ಖಾದರ್ ಜಿಲಾನಿ ಮತ್ತು ಸಿಬ್ಬಂದಿಗಳಾದ ಶಂಕರ್ ಜಾಧವ್, ಪ್ರಕಾಶ್, ಗಿರೀಶ್ ಗೌಡ, ದಾದಾ ಖಲಂದರ್, ಮಂಜಪ್ಪ, ಷಣ್ಮುಖ ಒಳಗೊಂಡ ತಂಡವು ಆರೋಪಿತನನ್ನು ಬಂಧಿಸಿದೆ.
January 12, 2025