ದಾವಣಗೆರೆ, ಜು.9- ವಿಮೆ ಮಾಡಿಸುವುದಾಗಿ ಬ್ಯಾಂಕ್ ಖಾತೆ ತೆರೆದು, ನಕಲಿ ಸಹಿ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಪನಹಳ್ಳಿ ತಾಲ್ಲೂಕು ತುಂಬಿಗೆರೆ ಗ್ರಾಮದ ಟಿ.ಎಂ. ಭೋಗೇಶ್ವರಯ್ಯ ಅವರು ಮಹೇಶ್ವರಯ್ಯ, ವಾಗೀಶ್, ಚಂದ್ರು, ಶಿವಕುಮಾರ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.
ಭೋಗೇಶ್ವರಯ್ಯ ಅವರ ಸಂಬಂಧಿ ಮಹೇಶ್ವರಯ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್‌ಐಸಿ ವಿಮೆ ಮಾಡಿಸುವುದಾಗಿ ಅಗತ್ಯ ದಾಖಲೆ ಪಡೆದು ಇಲ್ಲಿನ ಹಳೆ ಪಿ.ಬಿ. ರಸ್ತೆಯ ಬ್ಯಾಂಕ್ ವೊಂದರಲ್ಲಿ ಖಾತೆ ತೆರೆದಿದ್ದರು. ಬಳಿಕ ನಿನ್ನ ಖಾತೆಯಲ್ಲಿ ಬೇರೆಯವರ ಬೆಳೆ ವಿಮೆ ಬಂದಿದ್ದು, ಅದನ್ನು ಬಿಡಿಸಿಕೊಡು ಎಂದು ಕೇಳಿದ್ದರು. ಅನುಮಾನಗೊಂಡ ಭೋಗೇಶ್ವರಯ್ಯ ಅವರು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಖಾತೆಯಲ್ಲಿ 29,67,700 ವಹಿವಾಟು ಮಾಡಿ ಖಾತೆ ದುರ್ಬಳಕೆ ಮಾಡಿಕೊಂಡಿ ರುವುದು ಬೆಳಕಿಗೆ ಬಂದಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.