ಹಳೇಬಿಸಲೇರಿ ನಾಲೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ : ಕೊಲೆ ಶಂಕೆ – ದೂರು

ದಾವಣಗೆರೆ, ಫೆ.17- ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇಬಿ ಸಲೇರಿ ಗ್ರಾಮದ ನಾಲೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿದೆ.

ಇಂದು ಮಧ್ಯಾಹ್ನ ಗ್ರಾಮದ ಬಟ್ಲಕಟ್ಟೆ ಕಡೆ ಹೋಗುವ ವೆಂಕಟಪ್ಪನ ಮಗ ಶೀನಪ್ಪ ಅವರ ಮನೆಯ ನೇರ ನಾಲೆಗೆ ಎಲ್ಲಿಂದಲೋ ತೇಲಿಕೊಂಡು ಬಂದ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವವು ಪತ್ತೆಯಾಗಿದ್ದು, ನೀರಿನಲ್ಲಿ ತೇಲಿಕೊಂಡು ಮುಂ ದಕ್ಕೆ ಹೋಗುತ್ತದೆ ಎಂಬ ಕಾರಣಕ್ಕೆ ಅದನ್ನು ಮೇಲಕ್ಕೆತ್ತಿ ದಡಕ್ಕೆ ಹಾಕಿ ನೋಡಿದಾಗ ತಲೆ, ಮುಖದ ಮೇಲೆ ಗಾಯಗಳಾಗಿದ್ದು, ಯಾವು ದೋ ಹರಿತವಾದ ಆಯುಧದಿಂದ ಯಾವುದೋ ಕಾರಣಕ್ಕೆ ಕೊಲೆ ಮಾಡಿ ಚಾನಲ್‌ಗೆ ಹಾಕಿರ ಬಹುದೆಂದು ಶಂಕಿಸಿ ನಾಲೆಯ ನೀರಗಂಟಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

error: Content is protected !!