ದಾವಣಗೆರೆ, ಮಾ.17- ಕಳೆದ ದಿನಾಂಕ 15 ರಂದು ಮಧ್ಯಾಹ್ನ 3 ಗಂಟೆಗೆ ನಗರದ ವೆಂಕಟೇಶ್ವರ ಸರ್ಕಲ್ ಹತ್ತಿರದ ಸುಚಿತ್ರ ಬೇಕರಿ ಮುಂಭಾಗ ಸುಮಾರು 38 ವರ್ಷ ವಯಸ್ಸಿನ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ..
ಮೃತನು 5 ಅಡಿ 5 ಇಂಚು ಎತ್ತರವಿದ್ದು, ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಸಾಧಾರಣ ದೇಹ ಹೊಂದಿರುತ್ತಾನೆ. ಹಣೆಯ ಎಡ ಭಾಗದಲ್ಲಿ ಹಳೆ ಗಾಯದ ಗುರುತು ಇದ್ದು, ಪಿಂಕ್ ಕಲರ್ ಚೆಕ್ಸ್ ಇರುವ ತುಂಬು ತೋಳಿನ ಶರ್ಟ್ ಧರಿಸಿರುತ್ತಾನೆ ಹಾಗೂ ನೀಲಿ ಬಣ್ಣದ ಜರ್ಕಿನ್, ಕಪ್ಪು, ನೀಲಿ, ಬಿಳಿ ಚೆಕ್ಸ್ನ ಲುಂಗಿ ಧರಿಸಿರುತ್ತಾನೆ.
ಈ ಚಹರೆಯುಳ್ಳ ವ್ಯಕ್ತಿಯ ಸಂಬಂಧಿಕರು ಆಜಾದ್ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಿ. ಸಂಪರ್ಕಿಸುವ ದೂರವಾಣಿ ಸಂಖ್ಯೆ 08192-259337, 259213, 253400, 237830 ಗೆ ಸಂಪರ್ಕಿಸಲು ಕೋರಲಾಗಿದೆ.