ಕುಷನ್ ಅಂಗಡಿಗೆ ಬೆಂಕಿ: ವಸ್ತುಗಳು ಭಸ್ಮ

ದಾವಣಗೆರೆ, ಏ.18- ಕುಷನ್ ಅಂಗಡಿಯೊಂ ದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡು ಕುಷನ್ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿರುವ ಘಟನೆ ಇಲ್ಲಿನ ವಿನೋಬ ನಗರ‌ 2ನೇ ಹಂತ ರೆಡ್ಡಿ ಬಿಲ್ಡಿಂಗ್ ಬಳಿ ಇಂದು ರಾತ್ರಿ 10.15ರ ಸುಮಾರಿಗೆ ಸಂಭವಿಸಿದೆ. ಬೆಂಗಳೂರು ಬೇಕರಿಯ ಸಮೀಪದ ನ್ಯೂ ಕಂಫರ್ಟ್ ಕುಷನ್ ಫರ್ನೀಚರ್ ವರ್ಕ್ಸ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಕುಷನ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್‌ ಅಂಗಡಿ ಬೀಗ ಹಾಕಲಾಗಿತ್ತು. ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ವಿಷಯ ತಿಳಿದಾಕ್ಷಣವೇ ಸ್ಥಳಕ್ಕಾಗಮಿಸಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳ ತಂಡ ಎರಡು ವಾಹನಗಳಲ್ಲಿ‌ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.  ಅಂದಾಜು 50 ಸಾವಿರದಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದ್ದು, ನಿಖರ ಪ್ರಮಾಣ ತಿಳಿದುಬಂದಿಲ್ಲ.

error: Content is protected !!