ದಾವ ಣಗೆರೆ, ಏ.14- ಮಾಜಿ ಸಚಿವ ಯು.ಟಿ. ಖಾದರ್ ಅವರಿದ್ದ ಕಾರು ತಾಲ್ಲೂಕಿನ ಆನಗೋಡಿನ ಬಳಿ ಇಂದು ಅಪಘಾತವಾಗಿದೆ.
ಬೆಂಗಳೂರಿನಿಂದ ಬರುತ್ತಿದ್ದ ಯು.ಟಿ. ಖಾದರ್ ಅವರ ಕಾರು ಮುಂದೆ ಹೋಗುತ್ತಿದ್ದ ಕಂಟೈನರ್ಗೆ ಡಿಕ್ಕಿ ಹೊಡೆದಿದೆ. ಮುಂಭಾಗದ ಬಾನೆಟ್ ನಜ್ಜುಗುಜ್ಜಾಗಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಾಜಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ್ದರಿಂದ ತಮ್ಮ ಕಾರು ಬಿಟ್ಟು ಬೇರೊಂದು ವಾಹನದ ಮೂಲಕ ಖಾದರ್ ಬೆಂಗಳೂರಿಗೆ ತೆರಳಿದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಮಾಜಿ ಸಚಿವರ ಆರೋಗ್ಯ ವಿಚಾರಿಸಿದ್ದಾರೆ.