ಹಣಕ್ಕಾಗಿ ವೃದ್ಧ ದಂಪತಿಯ ಮೇಲೆ ಹಲ್ಲೆ: ವೃದ್ಧನ ಸಾವು

ಕೊಲೆ ಆರೋಪಿಗಳ ಬಂಧನ

ನ್ಯಾಮತಿ, ಫೆ.11- ಹಣ ಸುಲಿಗೆ ಮಾಡಲು ವಯೋವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ವೃದ್ಧನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಇಂದು ಬಂಧಿಸಿದ್ದಾರೆ.

ನ್ಯಾಮತಿ ತಾಲ್ಲೂಕು ಸಿದ್ದಾಪುರ ಗ್ರಾಮದ ವಿರುಪಾಕ್ಷಪ್ಪ (65) ಮತ್ತು ಪಾರ್ವತಮ್ಮ (62) ಈ ದಂಪತಿ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡಿದ್ದ ವಿರುಪಾಕ್ಷಪ್ಪ ಮೃತಪಟ್ಟಿದ್ದಾರೆ. ನ್ಯಾಮತಿ ತಾಲ್ಲೂಕು ಬಿದರಹಳ್ಳಿ ಗ್ರಾಮದವರಾದ ಕೆಲಸಗಾರ ಟಿ. ಮಂಜಾನಾಯ್ಕ, ಸಿದ್ದೇಶನಾಯ್ಕ, ಎಸ್. ಮಂಜಾನಾಯ್ಕ, ಹೊಸಜೋಗ ಗ್ರಾಮದ ಎಸ್. ನಾಗರಾಜನಾಯ್ಕ ಬಂಧಿತ ಆರೋಪಿಗಳು.

ಈ ದಂಪತಿ ಇಬ್ಬರೂ ಗ್ರಾಮದ ಸವಳಂಗ-ಶಿಕಾರಿಪುರ ರಸ್ತೆ ಬದಿಯಲ್ಲಿ ಟೀ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು, ಪ್ರತಿ ದಿನ ರಾತ್ರಿ ಅಂಗಡಿ ಯಲ್ಲೇ ಮಲ ಗುತ್ತಿ ದ್ದರು. ಎಂದಿನಂತೆ ಟೀ ಅಂಗಡಿ ಯಲ್ಲಿದ್ದ ವೇಳೆ ಇದೇ 4ರಂದು ಬೆಳಗಿನ ಜಾವ 3.30 ರಿಂದ 4 ಗಂಟೆ ಸಮಯದಲ್ಲಿ ಅಂಗಡಿಗೆ ಟೀ ಸಿಗರೇಟು ಕೇಳಲು ಬಂದ ಬಂಧಿತ ಆರೋಪಿಗಳು ಏಕಾಏಕಿ ಕಬ್ಬಿಣದ ಸುತ್ತಿಗೆ ಮತ್ತು ಕಲ್ಲಿನಿಂದ ಈ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಪ್ರಯತ್ನಿಸಿದ್ದಾರೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ವಿರುಪಾಕ್ಷಪ್ಪ ಆಸ್ಪತ್ರೆಗೆ ದಾಖಲಿ ಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಎಸ್ಪಿ ಹನುಮಂತರಾಯ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ನಂತರ ಎಎಸ್ಪಿ ಎಂ. ರಾಜೀವ್, ಚನ್ನಗಿರಿ ಉಪ ವಿಭಾಗದ ಡಿವೈಎಸ್‍ಪಿ ಪ್ರಶಾಂತ್ ಜಿ. ಮುನ್ನೋಳಿ ಮಾರ್ಗದರ್ಶನದಲ್ಲಿ ಆರೋಪಿ ತರ ಪತ್ತೆಗೆ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್  ನೇತೃತ್ವದಲ್ಲಿ ಪಿಎಸ್ ಐ ಪಿ.ಎಸ್. ರಮೇಶ್ ಮತ್ತು ಸಿಬ್ಬಂದಿಗಳಾದ ರವಿ ನಾಯಕ, ಕರಿಬಸಪ್ಪ ತಳ ವಾರ, ಕೆ. ಮಂಜಪ್ಪ, ಹೆಚ್. ರಜಾಕ್, ಸುರೇಶ್, ಉಮೇಶ್, ಸಂಜೀವ ಕೊಟಗಿಮನಿ, ಚನ್ನೇಶ್, ಮಂಜುನಾಥ್, ಕೆ.ಆರ್. ರಾಮಪ್ಪ, ಚಂದ್ರಶೇಖರ, ಪ್ರಶಾಂತ ಮತ್ತು ಎಂ. ಆನಂದ ಅವರನ್ನೊಳಗೊಂಡ ತಂಡವು  ಆರೋಪಿಗಳನ್ನು ಬಂಧಿಸಿ, ಸುಲಿಗೆ ಮಾಡಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.

error: Content is protected !!