ಮಚ್ಚು ತೋರಿಸಿ 30 ಲಕ್ಷ ದರೋಡೆ

ಕೊಟ್ಟೂರು, ಏ.12- ಸೀಡ್ಸ್‌ ಕಂಪನಿ ವ್ಯವಸ್ಥಾಪಕರೊಬ್ಬರ ಮನೆಗೆ ನುಗ್ಗಿ ಮಚ್ಚು ತೋರಿಸಿ 30 ಲಕ್ಷ ರೂ. ದರೋಡೆ ಮಾಡಿದ ಘಟನೆ ಪಟ್ಟಣದ ಬಸವೇಶ್ವರ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕೊಟ್ಟೂರಿನ ಮಲ್ಲೇಶ್‌ ಹುಲ್ಮನಿ ಎಂಬ ಸೀಡ್ಸ್‌ ಕಂಪನಿ ಮುಖ್ಯಸ್ಥ ತನ್ನ ಮನೆಯಲ್ಲಿದ್ದಾಗ ರಾತ್ರಿ ವೇಳೆ ಡಕಾಯಿತರು ಮನೆಗೆ ನುಗ್ಗಿ ಸಿನಿಮೀಯ ರೀತಿಯಲ್ಲಿ ಹಣ ದೋಚಿದ್ದಾರೆ. ಕೊಟ್ಟೂರು ಪಿಎಸ್‌ಐ ಹೆಚ್‌. ನಾಗಪ್ಪ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.

error: Content is protected !!