ಕೂಡ್ಲಿಗಿಯಲ್ಲಿ ಜೋಡಿ ಕೊಲೆ ಪ್ರಕರಣ : ಶರಣಾದ ಆರೋಪಿ

ಕೂಡ್ಲಿಗಿ, ಫೆ.3- ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಕೂಡ್ಲಿಗಿ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ.

ಕಳೆದ ಜನವರಿ 6 ರಂದು ಟಿ.ಹಿರಾಳ್‌ ಗ್ರಾಮದಿಂದ ತನ್ನ ಮೂವರು ಮಕ್ಕಳೊಂದಿಗೆ ಆರೋಪಿ ಜಹಾಂಗೀರ್‌ ಪತ್ನಿ ತಬಸಮ್‌ ಕಾಣೆಯಾಗಿದ್ದಳು. 15 ರಂದು ಪ್ರಕರಣ ಸಹ ದಾಖಲಾಗಿತ್ತು.

ಗ್ರಾಮಕ್ಕೆ ಬರುವುದಾಗಿ ಪ್ರಿಯಕರ ಫಯಾಜ್‌ ಜಹಾಂಗೀರ್‌ಗೆ ಫೋನ್‌ ಮಾಡಿದಾಗ ಊರಿಗೆ ಬೇಡ ಹೊಲದಲ್ಲಿ ಇರುವಂತೆ ಹೇಳಿ ಹೊಲಕ್ಕೆ ಹೋದಾಗ ಮಾತಿನ ವಾಗ್ವಾದ ನಡೆದು ಪತ್ನಿ ತಬಸಮ್‌ ಮತ್ತು ಫಯಾಜ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿಯನ್ನು ನ್ಯಾಯಾಲಯದ ಆದೇಶದಂತೆ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.

error: Content is protected !!