ಮಲೇಬೆನ್ನೂರಿನ ಚಾನಲ್‌ನಲ್ಲಿ ಅಪರಿಚಿತ ಪುರುಷನ ಶವ ಪತ್ತೆ

ಮಲೇಬೆನ್ನೂರು, ಫೆ.2- ಬಸವಾಪಟ್ಟಣ ವ್ಯಾಪ್ತಿಯ 8ನೇ ಜೋನ್ ಚಾನಲ್‌ನಲ್ಲಿ ಎರೆಬೂದಿಹಾಳ್ ಗ್ರಾಮದ ಹನುಮಂತಗೌಡ್ರು ಎಂಬುವವರ ಜಮೀನಿನ ಮುಂಭಾಗದ ಚಾನಲ್ ನೀರಿನಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 60-65 ವರ್ಷದ ಅಪರಿಚಿತ ಪುರುಷನ ಶವ ನೀರಿನಲ್ಲಿ ತೇಲುತ್ತಾ ಬಂದಿದೆ. ದುಂಡು ಮುಖ, ದೃಢಕಾಯ ಶರೀರ ಹೊಂದಿದ್ದು, ಮುಖವು ನೀರಿನ ರಭಸಕ್ಕೆ ಸಿಲುಕಿ ಗುರುತು ಸಿಗದಂತಿರುತ್ತದೆ. ವಿವರಕ್ಕೆ ಜಿಲ್ಲಾ ಕಂಟ್ರೋಲ್ ರೂಂ-08192-253100, ಮಲೇಬೆನ್ನೂರು ಪೊಲೀಸ್ ಠಾಣೆ: 08192-268758ರಲ್ಲಿ ಸಂಪರ್ಕಿಸಬಹುದು.

error: Content is protected !!