ದಾವಣಗೆರೆ, ಏ.2- ಅಂತರ್ ಜಿಲ್ಲಾ ಕನ್ನ ಕಳವು ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿ, 1 ಲಕ್ಷ ರೂ. ನಗದು, ಒಂದು ತೊಲ ಬಂಗಾರದ ಸರ ಬೆಲೆ 40 ಸಾವಿರ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಬಸವರಾಜ ಹಾಗೂ ಸಿಪಿಐ ಆರ್.ಆರ್. ಪಾಟೀಲ್ ಮುಂದಾಳತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಿ.ಎಸ್. ರೂಪ್ಲಿಬಾಯಿ, ಜಿ. ಜಗದೀಶ್ ಮತ್ತು ಸಿಬ್ಬಂದಿಗಳಾದ ಎಸ್.ಆರ್. ರುದ್ರೇಶ್, ಎಂ. ರುದ್ರೇಶ್, ಪ್ರವೀಣ್ ಗೌಡ, ಮಂಜುನಾಥ ಪ್ರಸಾದ್, ರೇವಣಸಿದ್ದಪ್ಪ, ಹನುಮಂತಪ್ಪ ಒಳಗೊಂಡ ತಂಡವು ಇಂದು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಪಡಿಸಿಕೊಂಡಿದ್ದಾರೆ.
December 27, 2024