ಐದು ಮನೆಗಳ್ಳತನ ಪ್ರಕರಣಗಳ ಪತ್ತೆ : ನಾಲ್ವರ ಬಂಧನ

ದಾವಣಗೆರೆ, ಜ.5- ಐದು ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ನಾಲ್ವರನ್ನು ಬಂಧಿಸಿ, ಒಟ್ಟು 9 ಲಕ್ಷದ 30 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 

ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದ ಕೃಷ್ಣ ಅಲಿಯಾಸ್ ಖಾದರ್ ಕೃಷ್ಣ, ರಾಮ ಅಲಿಯಾಸ್ ಬುಡ್ಡರಾಮ, ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಮೈಲಾರಿ ಅಲಿಯಾಸ್ ವಗ್ಗ ಮೈಲಾರಿ, ಕುಮಾರ ಅಲಿಯಾಸ್ ವಗ್ಗ ಕುಮಾರ ಬಂಧಿತರು. 

ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೃಷ್ಣ, ರಾಮನನ್ನು ಬಂಧಿಸಿ, ಸುಮಾರು 2 ಲಕ್ಷದ 80 ಸಾವಿರ ಮೌಲ್ಯದ 4 ಕೆಜಿ 600 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಇದೇ ತಂಡದ ಮೈಲಾರಿ, ಕುಮಾರ ಅವರನ್ನು ಬಂಧಿಸಿ, ಮಾಯಕೊಂಡ ಠಾಣೆ, ಅಜ್ಜಂಪುರ ಪೊಲೀಸ್ ಠಾಣೆ, ಹೊಳಲ್ಕೆರೆ ಪೊಲೀಸ್ ಠಾಣೆ ಸೇರಿ ಒಟ್ಟು 4 ಪ್ರಕರ ಣಗಳನ್ನು ಪತ್ತೆ ಹಚ್ಚಿ ಸುಮಾರು 6 ಲಕ್ಷ ರೂ. ಮೌಲ್ಯದ ಸುಮಾರು 120 ಗ್ರಾಂ ತೂಕದ ಬಂಗಾರದ ಆಭರಣಗಳು, 50 ಸಾವಿರ ಮೌಲ್ಯದ  ಬೈಕ್‍ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಮ್ಮ ಕಚೇರಿಯಲ್ಲಿ ಇಂದು ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಈ ನಾಲ್ಕು ಜನರು ಎರಡು ತಂಡಗಳ ನ್ನಾಗಿ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದರು. ಈ ಕಳ್ಳರು ಹಿಂದೆ ಹಲವು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಸುಮಾರು ಎರಡು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆ ಹೊಂದಿ ಈ ಅವಧಿಯಲ್ಲಿ ಕಳ್ಳತನ ಮಾಡಿದ್ದಾರೆ.

ಈ ಪ್ರಕರಣಗಳನ್ನು ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಜಿ. ಮನ್ನೋಳಿ ಮಾರ್ಗದರ್ಶನ ದಂತೆ ಚನ್ನಗಿರಿ ವೃತ್ತದ ಸಿಪಿಐ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ಸಂತೇಬೆನ್ನೂರು ಪಿಎಸ್‍ಐ ಶಿವರುದ್ರಪ್ಪ ಎಸ್. ಮೇಟಿ, ಸಿಬ್ಬಂದಿಗಳಾದ ಎಂ. ರುದ್ರೇಶ, ಎಸ್.ಆರ್. ರುದ್ರೇಶ, ಡಿ. ನಿಂಗಣ್ಣ, ಎಸ್. ಧರ್ಮಪ್ಪ ಕೊಟ್ರೇಶ, ನಾಗರಾಜನಾಯ್ಕ, ರಂಗಸ್ವಾಮಿ, ಯಶವಂತ, ಯೋಗೇಶ, ರೇವಣಸಿದ್ದಪ್ಪ , ಸೋಮಶೇಖರ, ಜಿಲ್ಲಾ ಪೊಲೀಸ್ ಕಛೇ ರಿಯ ಬೆರಳು ಮುದ್ರೆ ಘಟಕದ ಪಿಎಸ್‍ಐ ಮಂಜುನಾಥ ಮತ್ತು ಅವರ ತಂಡ, ರಾಘ ವೇಂದ್ರ ಮತ್ತು ತಂಡವು ಬೇಧಿಸಿದೆ. ಇದೇ ವೇಳೆ ಕಳೆದ ನವಂಬರ್, ಡಿಸೆಂಬರ್‍ನಲ್ಲಿ ಜಿಲ್ಲೆಯಲ್ಲಿ ನಡೆದ ವರ್ಷದ ಮೊದಲನೆಯ ದಾದ ಈ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಎಸ್ಪಿ ಹನುಮಂತರಾಯ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿದರು.

ಮಾವಿನ ಮರದಲ್ಲಿ ಅವಿತಿಟ್ಟ ಚಿನ್ನಾಭರಣ ಪತ್ತೆ: ಈ ಪ್ರಕರಣಗಳಲ್ಲಿ ಮಾಜಿ ಸಂಸದ ಟಿ.ವಿ. ಚಂದ್ರಶೇಖರಪ್ಪ ಅವರ ಚನ್ನಗಿರಿ ತಾಲ್ಲೂಕಿನ ನಲ್ಕುದರೆಯಲ್ಲಿರುವ ತೋಟದ ಮನೆಯಲ್ಲಿದ್ದ ಚಿನ್ನಾಭರಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿದ್ದರು. ಹೀಗೆ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಈ ನಾಲ್ವರು ಕಳ್ಳರು ಮಾವಿನ ಮರದ ಮೇಲೆ ಬಚ್ಚಿಡುತ್ತಿದ್ದರು. ಈ ಪ್ರಕರಣವನ್ನು ತುಂಗಾ ಶ್ವಾನ ದಳ ತಂಡ ಮತ್ತು ಬೆರಳಚ್ಚು ತಂಡದ ಸಹಕಾರದಲ್ಲಿ ಪತ್ತೆ ಹಚ್ಚಿರುವುದಾಗಿ ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.

error: Content is protected !!