ಹರಿ ಹರ, ಜ.4- ನಗರದ ನಡವಲ ಪೇಟೆ ಬಡಾವಣೆಯ ಶಂಭುಲಿಂಗಪ್ಪ ತಂದೆ ಬಸವರಾಜ್ (38) ಎಂಬಾತ ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ಮನೆಯ ಮುಂದಿನ ನೀರಿನ ಮೋಟರ್ ಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಮೋಟರ್ ನ ಸ್ವಿಚ್ ಮತ್ತು ಪ್ಲಗ್ಗೆ ಸಿಕ್ಕಿಸಿದ ವೈರ್ನ ಸ್ವಿಚ್ಚನ್ನು ಸಂಪರ್ಕಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ದಾವಣಗೆರೆ ಶಶಿ ಸೋಪ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಮೃತರ ಮನೆಗೆ ನಗರ ಠಾಣೆಯ ಪಿಎಸ್ಐ ಸುನೀಲ್ ಬಸವರಾಜ್ ತೆಲಿ ಭೇಟಿ ನೀಡಿದ್ದರು.
February 26, 2025