ದಾವಣಗೆರೆ, ಜ.4- ಬುದ್ಧಿಮಾಂದ್ಯ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿರುವ ಘಟನೆ ತಾಲ್ಲೂಕಿನ ಮ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮ್ಯಾಸರಹಳ್ಳಿ ಪ್ರಭು ಮತ್ತು ಆತನ ಸ್ನೇಹಿತ ಕುಂದುವಾಡ ಕಿರಣ್ ಎಂಬುವವರೇ ಅತ್ಯಾಚಾರ ವೆಸಗಿರುವ ಆರೋಪಿಗಳು ಎನ್ನಲಾಗಿದೆ. ಈ ಇಬ್ಬರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ನಾಪ ತ್ತೆಯಾಗಿದ್ದು, ಆತನ ಪತ್ತೆಗೆ ಶೋಧ ಕೈಗೊಂಡಿದ್ದಾರೆ. ಬುದ್ಧಿಮಾಂದ್ಯಳಾದ ಪತ್ನಿಯನ್ನು ಪತಿಯು ಆರೈಕೆ ಮಾಡಿಕೊಂಡು ಕೂಲಿ ಕೆಲಸದೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದರು. ಮಧ್ಯಾಹ್ನವಾದರೂ ಮಹಿಳೆ ಮನೆಗೆ ಬಾರದಿದ್ದಾಗ ಪತಿ ಹಾಗೂ ಮನೆಯವರು ಹುಡುಕಾಟ ನಡೆಸಿದಾಗ ಆರೋಪಿಗಳಿಬ್ಬರು ಆಕೆಯನ್ನು ಕರೆದು ಕೊಂಡು ಹೋಗುತ್ತಿದ್ದಾರೆಂಬ ವಿಚಾರ ಗೊತ್ತಾಗಿದೆ. ನಂತರ ಹುಡುಕಾಟದ ವೇಳೆ ಆಕೆಯ ಚೀರಾಟ, ಅಳುವುದು ಕೇಳಿಸಿದಾಗ ಸ್ಥಳಕ್ಕೆ ಬಂದ ಸಂಬಂಧಿಕರು ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಂತ್ರಸ್ಥೆಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
December 26, 2024