ಮಾನ್ಯರೇ,
ರೈಲಿನಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ಪ್ರಸಕ್ತ ಬೇಸಿಗೆ ರಜೆಗೆ ವಿಶೇಷ ರೈಲುಗಳನ್ನು ಓಡಿಸುವಂತೆ ಒಂದು ಮನವಿ.
ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹಾಗೂ ದಾವಣಗೆರೆಯಿಂದ ದಿನ ಸಾವಿರಾರು ಜನರು ಪ್ರಯಾಣ ಬೆಳೆಸುತ್ತಾರೆ, ಈಗ ಇರುವ ರೈಲು ಗಾಡಿಗಳಲ್ಲಿ ರಿಜರ್ವೇಷನ್ ಸಿಗುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ನೈರುತ್ಯ ರೈಲ್ವೆ ವಲಯದಿಂದ ಚೆನ್ನೈ, ಮುಂಬೈ, ಜೋದ್ಪುರ್, ಅಜ್ಮೇರ್, ಅಹಮದಾಬಾದ್, ಕೊಲ್ಹಾಪುರ್, ಕೊಯಮತ್ತೂರು, ಹೈದರಾಬಾದ್, ವಿಶಾಖಪಟ್ಟಣಂ, ಕೊಚುವೆಲಿ ಹಾಗೂ ನವದೆಹಲಿಗೆ ಬೇಸಿಗೆ ವಿಶೇಷ ರೈಲು ಗಾಡಿಗಳನ್ನು ಓಡಿಸಬೇಕು.
ತಾವು ದಯಮಾಡಿ ನಮ್ಮ ಮನವಿಯನ್ನು ಸಕಾರಾತ್ಮವಾಗಿ ಪರಿಗಣಿಸಿ ಬೇಸಿಗೆ ರಜೆಗೆ ವಿಶೇಷ ರೈಲುಗಾಡಿ ಓಡಿಸುವ ಮೂಲಕ ಸಾವಿರಾರು ಜನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಾಗಿ ಕೋರುತ್ತವೆ.
-ರೋಹಿತ್ ಎಸ್ ಜೈನ್, ಮುಖ್ಯ ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ