ಭವಿಷ್ಯದ ಜಗತ್ತು ಮುಕ್ತ ಮಾರುಕಟ್ಟೆಯ ಮುಂಗಟ್ಟಿನಂತಾಗಲಿದೆ

ಭವಿಷ್ಯದ ಜಗತ್ತು ಮುಕ್ತ ಮಾರುಕಟ್ಟೆಯ ಮುಂಗಟ್ಟಿನಂತಾಗಲಿದೆ

ಬಾಪೂಜಿ ಹೈಟೆಕ್ ಕಾಲೇಜಿನ ಬಿ.ಕಾಂ. ಪದವಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್

ದಾವಣಗೆರೆ, ಏ.3- ಜಾಗತಿಕ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸಲು ವಿಶ್ವದ ಅನೇಕ ದೇಶಗಳಲ್ಲಿ ಪೈಪೋಟಿ ಇದ್ದು, ನಿಯಂತ್ರಿತ ಅಥವಾ ರಕ್ಷಣಾತ್ಮಕ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಕಡಿಮೆ ಎಂಬುದು ಅರಿವಾಗಿದ್ದು, ಭವಿಷ್ಯದ ಜಗತ್ತು ಮುಕ್ತ ಮಾರುಕಟ್ಟೆಯ ಮುಂಗಟ್ಟಿನಂತಾಗಲಿದೆ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು. 

ನಗರದ ಬಾಪೂಜಿ ಹೈಟೆಕ್ ಎಜುಕೇಷನ್‌ನ ಬಿಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ವಾಣಿಜ್ಯಶಾಸ್ತ್ರವು ವ್ಯಾಪಾರೋದ್ಯಮ, ಲೆಕ್ಕಪತ್ರ, ಅಂಕಿ – ಅಂಶ, ಆರ್ಥಿಕ ತತ್ವಗಳು, ತೆರಿಗೆ ವಿಧಾನ, ವಿಮೆ, ಮಾರುಕಟ್ಟೆ ಹಾಗೂ ಕಾನೂನು ಕಾಯ್ದೆಗಳು ಎಲ್ಲಾ ವಿಷಯಗ ಳನ್ನೂ ಒಳಗೊಂಡಂತಿದ್ದು, ಬಿಕಾಂ ಪದವಿಗೆ ಹೆಚ್ಚು ಬೇಡಿಕೆ ಇದೆ.  ಭಾರತದಲ್ಲಿ ಪ್ರತಿವರ್ಷ ಹೊರಬರುವ ಸಾಮಾನ್ಯ ಪದವೀಧರ ರುಗಳಲ್ಲಿ ಶೇ.70 ರಷ್ಟು ಬಿಕಾಂ ಪದವೀಧ ರರೇ ಆಗಿರುತ್ತಾರೆ. ದೇಶದ 962 ವಿಶ್ವವಿದ್ಯಾನಿಲಯಗಳ ಸುಮಾರು 38200 ಕಾಲೇಜುಗುಳಿಂದ ಪ್ರತಿ ವರ್ಷ ಕನಿಷ್ಠ ನಾಲ್ಕು ಲಕ್ಷ ಬಿಕಾಂ ಪದ ವೀಧರರು ಹೊರ ಬರುತ್ತಿದ್ದು, ಸ್ವ-ಉದ್ಯೋಗ ಮಾಡಲಿಕ್ಕಾಗಲೀ ಅಥವಾ ಉದ್ಯೋಗಿಗಳಾಗಿ ಹೋಗಲಿಕ್ಕಾಗಲೀ ಈ ಶಿಕ್ಷಣ ಅನುಕೂಲಕರವಾಗಿದೆ. ಭಾರತವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮು ವಲ್ಲಿ ವಾಣಿಜ್ಯಶಾಸ್ತ್ರ ಪದವೀಧರ ಜವಾಬ್ದಾರಿಯೂ ಮಹತ್ವದ್ದಾಗಿದೆ ಎಂದರು.  

`ಅಭಿವೃದ್ಧಿಶೀಲ ರಾಷ್ಟ್ರ’ವೆಂಬ ದೀರ್ಘಕಾಲದ ಹಣೆ ಪಟ್ಟಿಯಿಂದ ಭಾರತವು `ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂಬ ಹೆಗ್ಗಳಿಕೆಗೆ ದಾಪುಗಾಲುಡುತ್ತಿದ್ದು, ವಿಶ್ವದ ವಾಣಿಜ್ಯಾತ್ಮಕ ವ್ಯವಸ್ಥೆಯು ಭಾರತದ ಹಿಡಿತಕ್ಕೆ ಬರುವ ಕಾಲ ದೂರವಿಲ್ಲ. ಇದಕ್ಕಾಗಿ ನಮ್ಮ ವಾಣಿಜ್ಯ ಶಾಸ್ತ್ರ ಪದವೀಧರ ವಿದ್ಯಾರ್ಥಿಗಳು ಪ್ರಯತ್ನಶೀಲತೆಯಿಂದ ಈ ಅವಕಾಶದ ಸದುಪಯೋಗ ಪಡಿಸಿಕೊಂಡು ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸ ಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ ವೀರಪ್ಪ ಅವರು ಮಾತನಾಡಿ, ಒಂದೇ ಪದವಿಗೆ ತೃಪ್ತರಾಗಿ ಉದ್ಯೋಗ ಅರಸಿಕೊಂಡು ಹೋಗುವ ಬದಲು ಇನ್ನಷ್ಟು ಪದವಿಗಳನ್ನು ಪಡೆದು ಜ್ಞಾನಿಗಳಾಗಿ ಸ್ವಉದ್ಯೋಗದ ಕಡೆಗೆ ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ  ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿದರು. ಶೈಕ್ಷಣಿಕ ವರದಿಯನ್ನು ಪ್ರೊ. ಬಿ.ವಿ. ಶ್ವೇತಾ ವಾಚಿಸಿದರು. ಪ್ರೊ. ಹೆಚ್.ಎಸ್.ವೀಣಾ ಹಾಗೂ ಪ್ರೊ. ಎಂ.ಎಸ್.ನಾಗರಾಜ್ ಅತಿಥಿಗಳ ಪರಿಚಯ ಮಾಡಿದರು. ಪ್ರತಿಭಾ ಪುರಸ್ಕೃತರ ಹಾಗೂ ಪದವೀಧರರ ನಾಮಘೋಷಣೆಗಳನ್ನು ಪ್ರೊ. ಡಿ.ಪಿ. ನಿಶಾರಾಣಿ ಹಾಗೂ ಪ್ರೊ. ಓ.ಹೆಚ್.ಲತಾ ಮಾಡಿದರೆ ಪದವೀಧರರಿಗೆ ಪ್ರಮಾಣ ವಚನವನ್ನು ಪ್ರೊ. ಆರ್.ಎಸ್.ಜ್ಞಾನೇಶ್ವರ ಬೋಧಿಸಿದರು. ಪ್ರೊ. ಬಿ.ಬಿ.ಮಂಜುನಾಥ್ ವಂದನೆಗಳನ್ನು ಸಮರ್ಪಿಸಿದರು.

error: Content is protected !!